ನವದೆಹಲಿ: ಅನಧಿಕೃತ ಕ್ರಿಕೆಟ್ ಲೀಗ್‌ಗೆ ರಾಯಭಾರಿಯಾಗಿದ್ದ ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೋಟಿಸ್ ನೀಡಿದ್ದು ಬಿಸಿಸಿಐ ಎಚ್ಚರಿಕೆಯ ನಂತರ ಗಂಭೀರ್ ಲೀಗ್ ರಾಯಭಾರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ದೆಹಲಿ ಮೂಲದ ಉದ್ಯಮಿ ದಿನೇಶ್ ಕಪೂರ್ ಇಂಡಿಯನ್ ಜೂನಿಯರ್ ಪ್ರೀಮಿಯರ್ ಲೀಗ್(ಐಜೆಪಿಎಲ್ ಟಿ20) ಎಂಬ ರಾಷ್ಟ್ರೀಯ ಮಟ್ಟದ ಟಿ20 ಕ್ರಿಕೆಟ್ ಆರಂಭಿಸಿದ್ದರು. ಇನ್ನು ಕೂಟಕ್ಕೆ ಗಂಭೀರ್ ಅವರನ್ನು ಅಧಿಕೃತ ರಾಯಭಾರಿಯಾಗಿ ಆಯ್ಕೆ ಮಾಡಲಾಗಿತ್ತು.
ಈ ಸಂಬಂಧ ಗಂಭೀರ್ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದು ಡಿಸೆಂಬರ್ 17ರಂದು ಗಂಭೀರ್ ಗೆ ಕಾರಣ ಕೇಳಿ ನೋಟಿಸ್ ಜಾರಿಮಾಡಿತ್ತು. ತಕ್ಷಣವೇ ಗಂಭೀರ್ ತಾವು ಲೀಗ್ ನಿಂದ ಹಿಂದೆ ಸರಿಯುತ್ತಿರುವ ವಿಷಯವನ್ನು ಬಿಸಿಸಿಐಗೆ ಖಚಿತಪಡಿಸಿದ್ದಾರೆ.
ಇನ್ನು ಇದೇ ಕೂಟದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್, ವೆಸ್ಟ್ ಇಂಡೀಸ್ ಆಟಗಾರ ಕೈರನ್ ಪೊಲಾರ್ಡ್ ಮತ್ತು ರಿಷಿ ಧವನ್ ರನ್ನು ಕೂಟದ ಸಲಹೆಗಾರರಾಗಿ ನೇಮಕವಾಗಿದ್ದಾರೆ.