3ನೇ ಏಕದಿನ ಪಂದ್ಯ: ಬುಮ್ರಾ ದಾಳಿಗೆ ತತ್ತರಿಸಿದ ಜಿಂಬಾಬ್ವೆ, ಭಾರತಕ್ಕೆ 124ರನ್ ಟಾರ್ಗೆಟ್

ಮೊದಲ ಎರಡು ಪಂದ್ಯಗಳನ್ನು ಗೆದ್ದು ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಈಗ ಜಿ೦ಬಾಬ್ವೆ ವಿರುದ್ಧದ ಮೂರನೇ ಹಾಗೂ...
ಬುಮ್ರಾ ಹಾಗೂ ಇತರರು
ಬುಮ್ರಾ ಹಾಗೂ ಇತರರು
Updated on: 
ಹರಾರೆ: ಮೊದಲ ಎರಡು ಪಂದ್ಯಗಳನ್ನು ಗೆದ್ದು ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಈಗ ಜಿ೦ಬಾಬ್ವೆ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ತುದಿಗಾಲಲ್ಲಿ ನಿಂತಿದೆ.
ಇಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ಭಾರತದ ಯುವ ವೇಗಿ ಜಸ್ಪ್ರೀಸ್ ಬುಮ್ರಾ (4) ದಾಳಿಗೆ ತತ್ತರಿಸಿದ ಜಿಂಬಾಬ್ವೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 123ರನ್​ಗಳಿಸುವ ಮೂಲಕ ಭಾರತಕ್ಕೆ 124 ರನ್ ಗಳ ಅಲ್ಪ ಮೊತ್ತದ ಸವಾಲು ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ, ಆರಂಭಿಕ ಬ್ಯಾಟ್ಸ್​ಮನ್ ಹ್ಯಾಮಿಲ್ಟನ್ ಮಸಕಜ (08) ವಿಕೆಟ್ ಪಡೆಯುವ ಮೂಲಕ ಧವಳ್ ಕುಲಕರ್ಣಿ ಆರಂಭಿಕ ಬ್ರೇಕ್ ನೀಡಿದರು. ಜಿಂಬಾಬ್ವೆ ಪರ ಹುಸಿ ಸಿಂಬಾಂಡ ಗಳಿಸಿದ 38 ರನ್ ವಯಕ್ತಿಕ ಗರಿಷ್ಠ ಮೊತ್ತವಾಗಿದೆ. ಭಾರತೀಯ ಬೌಲರ್​ಗಳ ಕರಾರುವಕ್ ಬೌಲಿಂಗ್ ದಾಳಿಗೆ ಜಿಂಬಾಬ್ವೆ ಯಾವ ಆಟಗಾರರು ಪ್ರತಿರೋಧ ತೋರುವಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಜಿಂಬಾಬ್ವೆ 42.2 ಓವರ್​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 123 ರನ್​ಗಳಿಸಿತು.
ಭಾರತದ ಪರ ಜಸ್ಪ್ರೀಸ್ ಬುಮ್ರಾ 4 ಹಾಗೂ ಚಾಹಲ್ 2 ವಿಕೆಟ್ ಪಡೆದು ಗಮನ ಸೇಳೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com