ಗುರು ಕುಂಬ್ಳೆ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ "ದಾದಾ"!

ತೀವ್ರ ಕುತೂಹಲ ಹುಟ್ಟಿಸಿದ್ದ ಟೀಂ ಇಂಡಿಯಾ ಕೋಚ್ ಆಯ್ಕೆ ಪ್ರಕ್ರಿಯೆಗೆ ಕೊನೆಗೂ ತೆರೆ ಬಿದ್ದಿದ್ದು, ಗುರು ಕುಂಬ್ಳೆ ಆಯ್ಕೆ ವಿಚಾರದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು ಮಾತ್ರ ಮಾಜಿ ನಾಯಕ ಸೌರವ್ ಗಂಗೂಲಿ ಎಂದು ಹೇಳಲಾಗುತ್ತಿದೆ.
ಸೌರವ್ ಗಂಗೂಲಿ ಮತ್ತು ಅನಿಲ್ ಕುಂಬ್ಳೆ (ಸಂಗ್ರಹ ಚಿತ್ರ)
ಸೌರವ್ ಗಂಗೂಲಿ ಮತ್ತು ಅನಿಲ್ ಕುಂಬ್ಳೆ (ಸಂಗ್ರಹ ಚಿತ್ರ)

ಧರ್ಮಶಾಲಾ: ತೀವ್ರ ಕುತೂಹಲ ಹುಟ್ಟಿಸಿದ್ದ ಟೀಂ ಇಂಡಿಯಾ ಕೋಚ್ ಆಯ್ಕೆ ಪ್ರಕ್ರಿಯೆಗೆ ಕೊನೆಗೂ ತೆರೆ ಬಿದ್ದಿದ್ದು, ಕನ್ನಡಿಗ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಆದರೆ ಗುರು ಕುಂಬ್ಳೆ ಆಯ್ಕೆ ವಿಚಾರದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು ಮಾತ್ರ ಮಾಜಿ ನಾಯಕ ಸೌರವ್ ಗಂಗೂಲಿ ಎಂದು ಹೇಳಲಾಗುತ್ತಿದೆ.

ಗುರುವಾರ ನಡೆದ ಸಂದರ್ಶನದಲ್ಲಿ ಕೋಚ್ ರೇಸ್ ನ ಕೇಂದ್ರ ಬಿಂದುವಾಗಿದ್ದ ರವಿಶಾಸ್ತ್ರಿ ಮತ್ತು ಅನಿಲ್ ಕುಂಬ್ಳೆ ಅವರಿಂದ ಪ್ರಾತ್ಯಕ್ಷಿಕೆ ಪಡೆದ ಸೌರವ್ ಗ೦ಗೂಲಿ, ಸಚಿನ್ ತೆ೦ಡುಲ್ಕರ್ ಹಾಗೂ  ವಿವಿಎಸ್ ಲಕ್ಷ್ಮಣ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಕೂಲಂಕುಷವಾಗಿ ಪ್ರಾತ್ಯಕ್ಷಿಕೆ ಪರಿಶೀಲಿಸಿದೆ. ವೇಳೆ ಸಿಎಸಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅನಿಲ್ ಕುಂಬ್ಳೆ ಉತ್ತರಿಸಿದ ಪರಿ  ಹಾಗೂ ಕುಂಬ್ಳೆ ಅವರ ಪ್ರಾತ್ಯಕ್ಷಿಕೆ ಸದಸ್ಯರ ಮನ ಗೆದ್ದಿದೆ. ಹೀಗಾಗಿ ಕುಂಬ್ಳೆ ಅವರನ್ನು ಕೋಚ್ ಹುದ್ದೆಗೆ ನೇಮಿಸಲಾಗಿದೆ ಎಂಬ ವಿಚಾರ ಸತ್ಯವಾದರೂ, ಕುಂಬ್ಳೆ ಆಯ್ಕೆಗೆ ಮತ್ತೊಂದು ಪ್ರಮುಖ  ಕಾರಣವೆಂದರೆ ಅದು ಸೌರವ್ ಗಂಗೂಲಿ.

ಹೌದು...2003ರ ವಿಶ್ವಕಪ್ ಫೈನಲ್ ಪಂದ್ಯದಿಂದ ಕುಂಬ್ಳೆ ಅವರನ್ನು ಕೈಬಿಟ್ಟಿದ್ದ ಇದೇ ಗಂಗೂಲಿ ಇಂದು ಟೀಂ ಇಂಡಿಯಾ ಕೋಚ್ ಆಯ್ಕೆಯಲ್ಲಿ ಕುಂಬ್ಳೆ ಅವರನ್ನು ಆಯ್ಕೆ ಮಾಡುವಲ್ಲಿ ಪ್ರಧಾನ  ಪಾತ್ರ ನಿರ್ವಹಿಸಿದ್ದಾರೆ. ಅಂದು ಅವರು ಮಾಡಿದ್ದ ಯಡವಟ್ಟಿನಿಂದಾಗಿ ವಿಶ್ವಕಪ್ ಭಾರತದ ಕೈತಪ್ಪಿತ್ತು. ಇಂದು ಆ ತಪ್ಪನ್ನು ಸರಿದೂಗಿಸಿರುವ ಗಂಗೂಲಿ ಕುಂಬ್ಳೆ ಅವರನ್ನು ಭಾರತ ತಂಡದ  ಗುರುವಾಗಿ ನೇಮಿಸಿದ್ದಾರೆ. ಕೋಚ್ ಆಯ್ಕೆ ಪ್ರಕ್ರಿಯೆಗೂ ಮೊದಲೇ ಹೇಳಿದ್ದ ಹಾಗೆ ಸೌರವ್ ಗಂಗೂಲಿ ಭಾರತ ತಂಡದಲ್ಲಿ ಮತ್ತೆ ಗ್ರೇಗ್ ಚಾಪೆಲ್ ಪ್ರಕರಣ ಮರುಕಳಿಸುವುದಿಲ್ಲ ಎಂಬ ಎಚ್ಚರಿಕೆಯ  ಮಾತುಗಳನ್ನಾಡಿದ್ದರು. ಇದೇ ವಿಚಾರ ಇದೀಗ ಕುಂಬ್ಳೆ ಆಯ್ಕೆಗೆ ನೇರ ಕಾರಣ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಶಾಸ್ತ್ರಿ ಹಿಂದೆ ಬಿಸಿಸಿಐ, ಕುಂಬ್ಳೆ ಹಿಂದೆ ಸಿಎಸಿ
 ಬಿಸಿಸಿಐನ ಉನ್ನತ ಅಧಿಕಾರಿಗಳ ವಗ೯ ಹಾಗೂ ಟೆಸ್ಟ್ ತ೦ಡದ ನಾಯಕ ವಿರಾಟ್ ಕೊಹ್ಲಿ, ರವಿಶಾಸ್ತ್ರಿ ಬೆನ್ನಿಗೆ ನಿ೦ತಿದ್ದರೆ, ಸಿಎಸಿ ಅನಿಲ್ ಕು೦ಬ್ಳೆ ಪರ ಒಲವು ಹೊ೦ದಿತ್ತು. ಸಿಎಸಿ ಸದಸ್ಯರಾದ  ಗ೦ಗೂಲಿ, ಸಚಿನ್ ಹಾಗೂ ಲಕ್ಷ್ಮಣ್ ಜತೆ ಹಲವು ವಷ೯ಗಳ ಕಾಲ ಕ್ರಿಕೆಟ್ ಆಡಿದ್ದ ಕು೦ಬ್ಳೆ ಕೋಲ್ಕತಾಕ್ಕೆ ತೆರಳಿ ಸ೦ದಶ೯ನ ನೀಡಿದ್ದರೆ, ರವಿಶಾಸ್ತ್ರಿ ವೀಡಿಯೋ ಕಾನ್ಫರೆನ್ಸ್ ಮೂಲಕ  ಸ೦ದಶ೯ನ ನೀಡಿದ್ದು ಹಿನ್ನಡೆಯಾಗಿತ್ತು. ಎಲ್ಲಕ್ಕಿ೦ತ ಮುಖ್ಯವಾಗಿ ಬಿಸಿಸಿಐ ಆರ೦ಭದಲ್ಲಿ ಜಾಹೀರಾತು ನೀಡಿದ್ದಾಗ "ಅ೦ತಾರಾಷ್ಟ್ರೀಯ ತ೦ಡಕ್ಕೆ ಕೋಚ್ ಆದ ಅನುಭವ ಇರಬೇಕು' ಎನ್ನುವ  ಮಾನದ೦ಡ ನೀಡಿತ್ತು. ಬಳಿಕ ಈ ಮಾನದ೦ಡಕ್ಕೆ ರಿಯಾಯಿತಿ ನೀಡಿದ್ದರಿ೦ದ ಕು೦ಬ್ಳೆ ಕೊನೇ ಕ್ಷಣದಲ್ಲಿ ಕೋಚ್ ಸ್ಥಾನಕ್ಕೆ ಅಜಿ೯ ಸಲ್ಲಿಸಿದ್ದರು. ಅದರೊ೦ದಿಗೆ ಸ೦ದಶ೯ನದ ವೇಳೆ ಕು೦ಬ್ಳೆ  ಟಿ20, ಏಕದಿನ ಹಾಗೂ ಟೆಸ್ಟ್ ಮಾದರಿಗೆ ಭಿನ್ನ ಯೋಜನೆಗಳನ್ನು ರೂಪಿಸಿದ್ದ ಕಾರಣ ಕೋಚ್ ಆಗಿ ಸಲೀಸಾಗಿ ಆಯ್ಕೆಯಾಗಲು ನೆರವಾಗಿದೆ.

ಶಾಸ್ತ್ರಿಗೆ ಕೋಚ್ ಹುದ್ದೆ ಕೈತಪ್ಪಲು ಗಂಗೂಲಿ ಕಾರಣ?

ಇನ್ನು ಟೀಂ ಇಂಡಿಯಾ ಕೋಚ್ ಆಯ್ಕೆಗೆ ಪ್ರಕಟಣೆ ಹೊರಬೀಳುತ್ತಿದ್ದಂಯೆತೇ ಮೊದಲ ವ್ಯಕ್ತಿಯಾಗಿ ಅರ್ಜಿ ಸಲ್ಲಿಸಿದ್ದು, ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ. ಅಂತೆಯೇ ಇಡೀ ಕೋಚ್  ರೇಸ್ ನಲ್ಲಿ ಶಾಸ್ತ್ರಿ ಮುಂಚೂಣಿಯಲ್ಲಿದ್ದರು. ಹೀಗಿದ್ದೂ ಶಾಸ್ತ್ರಿಗೆ ಗುರು ಹುದ್ದೆ ಹೇಗೆ ಕೈ ತಪ್ಪಿತು ಎಂಬ ಪ್ರಶ್ನೆ ಎದ್ದಿದ್ದು, ಇದಕ್ಕೆ ಬಂದ ಉತ್ತರ ಸೌರವ್ ಗಂಗೂಲಿ. ಇಂತಹುದೊಂದು ವಾದ  ಭಾರತೀಯ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ. ಈ ಹಿಂದೆ ಮತ್ತೆ ಟೀಂ ಇಂಡಿಯಾ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಹಲವು ಬಾರಿ ರವಿಶಾಸ್ತ್ರಿ ವಿರಾಟ್ ಕೊಹ್ಲಿಗೆ ಎಲ್ಲ ಮಾದರಿಯ ಕ್ರಿಕೆಟ್ ಗೆ  ನಾಯಕತ್ವ ನೀಡುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಶಾಸ್ತ್ರಿ ಅವರ ಈ ವಾದಕ್ಕೆ ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಟೀಂ ಇಂಡಿಯಾದ ಡ್ರೆಸಿಂಗ್ ರೂಂ ನಲ್ಲಿಯೂ ಈ ಬಗ್ಗೆ  ಚರ್ಚೆ ನಡೆದ ಉದಾಹರಣೆ ಇದೆ. ಅಂತೆಯೇ ನಿಗದಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ರಿಕಾ ಗೋಷ್ಠಿಯಲ್ಲಿಯೂ ಅವರ ನಿವೃತ್ತಿ ಕುರಿತ ಪ್ರಶ್ನೆಗಳು ಪದೇ  ಪದೇ ಕೇಳಿಬರುತ್ತಿತ್ತು. ಇದು ತಂಡದಲ್ಲಿನ ಉತ್ತಮ ವಾತವಾರಣವನ್ನು ಹಾಳುಮಾಡುವ ಸಾಧ್ಯತೆ ಇರುವುದರಿಂದಲೇ ಗಂಗೂಲಿ ಕುಂಬ್ಳೆಗೆ ಮಣೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೆ ಪೂರಕವೆಂಬಂತೆ ಸಂದರ್ಶನದ ವೇಳೆ ಕುಂಬ್ಳೆ ನೀಡಿದ ಪ್ರಾತ್ಯಕ್ಷಿಕೆ ಮತ್ತು ವಿದೇಶದಲ್ಲಿ ತಂಡ ಗೆಲ್ಲಲು ಬೇಕಾದ ಅರ್ಹತೆಗಳು ಮತ್ತು ಕ್ರಮಗಳ ಕುರಿತು ಅವರು ನೀಡಿದ ಉತ್ತರಗಳು  ಸಲಹಾ ಸಮಿತಿ ಸದಸ್ಯರಾಗಿರುವ ಸಚಿನ್, ಗಂಗೂಲಿ ಹಾಗೂ ಲಕ್ಷ್ಮಣ್ ಅವರ ಮನಗೆದ್ದಿದೆ. ಈ ಮೂವರೂ ಆಟಗಾರರು ದಶಕಗಳ ಕಾಲ ಕುಂಬ್ಳೆ ಅವರೊಂದಿಗೆ ಆಡಿದ್ದು, ಅವರ ಧನಾತ್ಮಕ ಮತ್ತು  ಋಣಾತ್ಮಕ ಅಂಶಗಳು ಇವರಿಗೆ ತಿಳಿದಿದೆ. ಹೀಗಾಗಿ ರವಿಶಾಸ್ತ್ರಿಗಿಂತಲೂ ಕುಂಬ್ಳೆ ಸೂಕ್ತ ಆಯ್ಕೆ ಎಂದು ನಿರ್ಧರಿಸಿರುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com