ಐಸಿಸಿ ಟಿ20 ವಿಶ್ವಕಪ್: ಜಿಂಬಾಬ್ವೆಗೆ 2ನೇ ಗೆಲುವು, ಪ್ರಧಾನ ಸುತ್ತಿನ ಆಸೆ ಜೀವಂತ

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೀನ್ ವಿಲಿಯಮ್ಸ್ (53ರನ್) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಹಾಗೂ ವೆಲ್ಲಿಂಗ್ಟನ್ ಮಸಕಜ (28ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿ ನೆರವಿನಿಂದ..
ಜಿಂಬಾಬ್ವೆ ಮತ್ತು ಸ್ಕಾಟ್ಲೆಂಡ್ ನಡುವಿನ ಪಂದ್ಯ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಜಿಂಬಾಬ್ವೆ ಮತ್ತು ಸ್ಕಾಟ್ಲೆಂಡ್ ನಡುವಿನ ಪಂದ್ಯ (ಚಿತ್ರಕೃಪೆ: ಕ್ರಿಕ್ ಇನ್ಫೋ)
Updated on: 

ನಾಗ್ಪುರ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೀನ್ ವಿಲಿಯಮ್ಸ್ (53ರನ್) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಹಾಗೂ ವೆಲ್ಲಿಂಗ್ಟನ್ ಮಸಕಜ (28ಕ್ಕೆ 4) ಅವರ ಮಾರಕ ಬೌಲಿಂಗ್  ದಾಳಿ ನೆರವಿನಿಂದ ಜಿಂಬಾಬ್ವೆ ತಂಡ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಸತತ 2ನೇ ಜಯ ದಾಖಲಿಸಿತು.

ನಾಗಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ತಂಡ 11 ರನ್‌ಗಳಿಂದ ಸ್ಕಾಟ್ಲೆಂಡ್ ತಂಡವನ್ನು ಮಣಿಸಿತು. ಆ ಮೂಲಕ ಜಿಂಬಾಬ್ವೆ ತಂಡ  ಪ್ರಧಾನ ಸುತ್ತಿಗೇರುವ ಆಸೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಆರಂಭಿಕ ವೈಫಲ್ಯದ ನಡೆವೆಯೂ ವಿಲಿಯಮ್ಸ್ ಹಾಗೂ  ಚಿಗುಂಬುರಾ (20) ನಡೆಸಿದ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸಾಧಾರಣ ಮೊತ್ತ ಕಲೆಹಾಕಿತು. ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 147ರನ್ ಪೇರಿಸಿದರೆ, ಪ್ರತಿಯಾಗಿ  ಸ್ಕಾಟ್ಲೆಂಡ್ ತಂಡ 19.4 ಓವರ್‌ಗಳಲ್ಲಿ 136ರನ್‌ಗಳಿಗೆ ಆಲ್ ಔಟ್ ಆಯಿತು.

ಜಿಂಬಾಬ್ವಿ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಸ್ಕಾಟ್ಲೆಂಡ್ ಗೆ ವೆಲ್ಲಿಂಗ್ಟನ್ ಮಸಕಜ (28ಕ್ಕೆ 4) ಹಾಗೂ ಟೆಂಡೈ ಚಟಾರಾ (24ಕ್ಕೆ 2) ಕಡಿವಾಣ ಹಾಕಿದರು. ರೀಚೀ ಬೆರ್ರಿಂಗ್ಟನ್ (36  ರನ್) ಹಾಗೂ ನಾಯಕ ಪ್ರಸ್ಟೊನ್ ಮೊಮ್ಸನ್ (31 ರನ್) ಜೋಡಿ 6ನೇ ವಿಕೆಟ್‌ಗೆ 51ರನ್ ಪೇರಿಸುವ ಮೂಲಕ ಜಿಂಬಾಬ್ವೆ ತಂಡಕ್ಕೆ ತಿರುಗೇಟು ನೀಡಲು ಯತ್ನಿಸಿದರು. ಆದರೆ ಈ ಜೋಡಿ  ಬೇರ್ಪಟ್ಟ ಬಳಿಕ ಜೋಷ್ ಡೇವೀ (24 ರನ್) ಬಿರುಸಿನ ಬ್ಯಾಟಿಂಗ್ ನಡೆಸಿದರೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ವಿಫಲರಾದರು.

ಅಂತಿಮವಾಗಿ ಜಿಂಬಾಬ್ವೆ ತಂಡ ಸ್ಕಾಟ್ಲೆಂಡ್ ವಿರುದ್ಧ 11 ರನ್ ಗಳ ಜಯಸಾಧಿಸಿತು.ಅಲ್ಲದೆ ಪ್ರಧಾನ ಸುತ್ತಿಗೇರುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com