ಕ್ರಿಕೆಟ್

ಆಫ್ರಿದಿ ಭಾರತ ಪ್ರೀತಿ: ನಾಚಿಕೆಯಾಗಬೇಕು ಎಂದ ಮಿಯಾಂದಾದ್

ಆಫ್ರಿದಿ ಭಾರತ ಪ್ರೀತಿ: ನಾಚಿಕೆಯಾಗಬೇಕು ಎಂದ ಮಿಯಾಂದಾದ್
ಶಾಹೀದ್ ಆಫ್ರಿದಿ, ಜಾವಿದ್ ಮಿಯಾಂದಾದ್
Published On :

ಕರಾಚಿ: ಪಾಕಿಸ್ತಾನ ಅಭಿಮಾನಿಗಳಿಗಿಂತ ಭಾರತೀಯರೇ ಹೆಚ್ಚು ಪ್ರೀತಿ ನೀಡುತ್ತಾರೆ ಎಂಬ ಶಾಹೀದ್ ಆಫ್ರಿದಿ ಹೇಳಿಕೆಗೆ ಪಾಕ್ ಮಾಜಿ ಕ್ರಿಕೆಟಿಗ ಜಾವಿದ್ ಮಿಯಾಂದಾದ್ ಕಿಡಿಕಾರಿದ್ದಾರೆ.

ಪಾಕಿಸ್ತಾನದವನಾಗಿದ್ದು ಭಾರತ ಕುರಿತಾದ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವುದು ಕ್ರಿಕೆಟಿಗನಾಗಿ ಶಾಹೀದ್ ಅಫ್ರಿದಿಗೆ ನಾಚಿಕೆಯಾಗಬೇಕು ಎಂದು ಜರಿದಿದ್ದಾರೆ.

ಟಿ20 ವಿಶ್ವಕಪ್ ಗಾಗಿ ಭಾರತಕ್ಕೆ ಆಗಮಿಸಿರುವ ಕ್ರಿಕೆಟಿಗ ಶಾಹೀದ್ ಅಫ್ರಿದಿ ಭಾರತದಲ್ಲಿ ಆಡಲು ನಮಗೆ ಯಾವುದೇ ಭಯವಿಲ್ಲ. ಪಾಕಿಸ್ತಾನ ಜನರಿಗಿಂತ ಇಲ್ಲಿನ ಜನ ನಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಹೇಳಿದ್ದರು. ಇದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗರ ಕಣ್ಣು ಕೆಂಪಾಗಿಸಿದೆ.

ಶಾಹೀದ್ ಅಫ್ರಿದಿ ನಾಯಕತ್ವದಲ್ಲಿ ಪಾಕ್ ತಂಡ ಭಾರತಕ್ಕೆ ಹೋಗಿರುವುದು ಟಿ20 ವಿಶ್ವಕಪ್ ಆಡಲು ಅದನ್ನು ಬಿಟ್ಟು ಆ ದೇಶವನ್ನು ಹೊಗಳುವುದಕ್ಕಲ್ಲ ಎಂದು ಮಿಯಾಂದಾದ್ ಕಿಡಿಕಾರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.