ಸಚಿನ್ ಗೆ ಗೆಲುವು ಸಮರ್ಪಿಸಿದ ವಿರಾಟ್ ಕೊಹ್ಲಿ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಸಚಿನ್ ಗೆ ಗೆಲುವು ಸಮರ್ಪಿಸಿದ ವಿರಾಟ್ ಕೊಹ್ಲಿ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಕ್ರಿಕೆಟ್ ದೇವರಿಗೆ ತಲೆ ಬಾಗಿ ನಮಸ್ಕರಿಸಿದ ವಿರಾಟ್ ಕೊಹ್ಲಿ

ಭಾರತದ ಅಭೂತ ಪೂರ್ವ ಜಯಕ್ಕೆ ಕಾರಣರಾದ ವಿರಾಟ್ ಕೊಹ್ಲಿ ತಮ್ಮ ಅರ್ಧಶತಕವನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ ಸಮರ್ಪಿಸಿದ್ದಾರೆ.
Published on

ಕೋಲ್ಕತಾ: ಶನಿವಾರ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ದಾಖಲಿಸಿದ್ದು, ಭಾರತದ ಅಭೂತ ಪೂರ್ವ ಜಯಕ್ಕೆ ಕಾರಣರಾದ ವಿರಾಟ್ ಕೊಹ್ಲಿ ತಮ್ಮ ಅರ್ಧಶತಕವನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ ಸಮರ್ಪಿಸಿದ್ದಾರೆ.

ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ತಂಡವನ್ನು ಗೆಲುವಿನತ್ತ ಸಾಗಿಸುತ್ತಲೇ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು. ಅರ್ಧಶತಕ ಸಿಡಿಸುತ್ತಿದ್ದಂತೆಯೇ ಭಾರತದ ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ತಮ್ಮ ಬ್ಯಾಟ್ ಅನ್ನು ತೋರಿಸುತ್ತಾ ತಲೆ ಬಾಗಿ ತಮ್ಮ ಅರ್ಧಶತಕವನ್ನು ಸಮರ್ಪಿಸಿದರು. ಇದು ಆ ಕ್ಷಣಕ್ಕೆ ಮೈದಾನದಲ್ಲಿ ಕ್ಕಿಕ್ಕಿರಿದು ತುಂಬಿದ್ದ ಭಾರತೀಯ ಅಭಿಮಾನಿಗಳಲ್ಲಿ ರೋಮಾಂಚಕ ಅನುಭವವನ್ನುಂಟು ಮಾಡಿತ್ತು. ಸಚಿನ್ ಕೂಡ ಕೊಹ್ಲಿ ಅವರ ಸಮರ್ಪಣೆಗೆ ನಗುತ್ತಲೇ ಪ್ರತಿಕ್ರಿಯೆ ನೀಡಿದರು.

ನಿನ್ನೆಯ ಜಯದೊಂದಿಗೆ ಪಾಕಿಸ್ತಾನದ ವಿರುದ್ಧ ಈಡನ್ ಗಾರ್ಡನ್ ನಲ್ಲಿ ಸತತ 29 ವರ್ಷಗಳಿಂದ ಭಾರತ ಎದುರಿಸುತ್ತಿದ್ದ ಗೆಲುವಿನ ಬರ ನೀಗಿದ್ದು, ಈ ಪಂದ್ಯದ ಗೆಲುವಿನಲ್ಲಿ ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಮಹತ್ವದ ಪಾತ್ರವಹಿಸಿದ್ದರು. ಪಾಕಿಸ್ತಾನ ನೀಡಿದ 118 ರನ್ ಗಳ ಸಾಧಾರಣ ಮೊತ್ತವನ್ನು ಪಾಕಿಸ್ತಾನ ಪ್ರಬಲ ಬೌಲಿಂಗ್ ನಡುವೆ ಬೆನ್ನಟ್ಟಲು ಕೊಹ್ಲಿ ಬ್ಯಾಟಿಂಗ್ ನೆರವಾಗಿತ್ತು. ಒಟ್ಟು 37 ಎಸೆತಗಳನ್ನು ಎದುರಿಸಿದ ಕೊಹ್ಲಿ ಅಜೇಯ 55 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com