

ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋತ ಪಾಕಿಸ್ತಾನ ತಂಡದ ವಿರುದ್ಧ ಮಾಜಿ ಆಟಗಾರ ಶೋಯಬ್ ಅಖ್ತರ್ ತೀವ್ರವಾಗಿ ಕಿಡಿಕಾರಿದ್ದಾರೆ.
ಪಂದ್ಯದಲ್ಲಿ ಪಾಕ್ ತಂಡದ ಆರಂಭಿಕರಾದ ಶಾರ್ಜೀಲ್ ಖಾನ್ ಹಾಕಿಕೊಟ್ಟ ಭದ್ರ ಬುನಾದಿಯನ್ನು ಸದೃಢವಾಗಿ ಬಳಸಿಕೊಳ್ಳಲು ಪರದಾಡಿದ ಮಧ್ಯಮ ಕ್ರಮಾಂಕದ ಆಟಗಾರರಾದ ಶೆಹಜಾದ್ ಹಾಗೂ ಉಮ್ಮರ್ ಅಕ್ಮಲ್ ಗೆ ನಾಚಿಕೆಯಾಗಬೇಕು ಎಂದು ಶೋಯಬ್ ಅಖ್ತರ್ ಕೆಂಡಮಂಡಲರಾಗಿದ್ದಾರೆ.
ಇನ್ನು ಇದೇ ರೀತಿ ಪಾಕ್ ಅಭಿಮಾನಿಗಳು ಪಾಕಿಸ್ತಾನ ಸೋಲಿನ ವಿರುದ್ಧ ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ.
ನ್ಯೂಜಿಲೆಂಡ್ ನೀಡಿದ 181 ರನ್ ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭಿಕ ಆಟಗಾರ ಶಾರ್ಜೀಲ್ ಖಾನ್ 26 ಎಸೆತಗಳಲ್ಲಿ 47 ಗಳನ್ನು ಸಿಡಿಸಿ ಉತ್ತಮ ಸ್ಕೋರ್ ಕಲೆಹಾಕಿದ್ದರು. ನಂತರ ಬಂದ ಮಧ್ಯಮ ಕ್ರಮಾಂಕದ ಆಟಗಾರರು ಹೆಚ್ಚಿನ ಎಸೆತಗಳಲ್ಲಿ ಕಡಿಮೆ ರನ್ ಪೇರಿಸಿದ್ದು, ಪಾಕಿಸ್ತಾನ ಸೋಲಿಗೆ ಕಾರಣವಾಗಿತ್ತು. ಪಾಕಿಸ್ತಾನ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ 22 ರನ್ ಗಳಿಂದ ಸೋಲು ಕಂಡಿತ್ತು.