'ಕ್ರಿಕೆಟ್ ನಲ್ಲಿಯೂ ದೇವರ ಹಸ್ತ', ಧೋನಿ ಅಂತಿಮ ಕ್ಷಣದ ನಿರ್ಧಾರಕ್ಕೆ ನೆಟಿಜನ್ ಗಳ ಜೈಕಾರ

ಆ ಒಂದು ಕ್ಷಣ ಕ್ರಿಕೆಟ್ ಪ್ರೇಮಿಗಳೆಲ್ಲರೂ ಉಸಿರು ಬಗಿ ಹಿಡಿದು ಕೂತಿದ್ದರು. ಇನ್ನೇನು ಪಂದ್ಯ ನಮ್ಮ ಕೈಯಿಂದ ಜಾರಿ ಹೋಯಿತು ಅನ್ನುತ್ತಿರುವಾಗಲೇ ವಿಕೆಟ್ ಕೀಪಿಂಗ್ ...
ಕೊನೆಯ ಓವರ್ ನಲ್ಲಿ ಗ್ಲೌಸ್  ಕಳಚಿದ ಧೋನಿ ( ವೀಡಿಯೋದಿಂದ ಸೆರೆ ಹಿಡಿದ ಫೋಟೋ )
ಕೊನೆಯ ಓವರ್ ನಲ್ಲಿ ಗ್ಲೌಸ್ ಕಳಚಿದ ಧೋನಿ ( ವೀಡಿಯೋದಿಂದ ಸೆರೆ ಹಿಡಿದ ಫೋಟೋ )
Updated on: 
ನವದೆಹಲಿ:  ಆ ಒಂದು ಕ್ಷಣ ಕ್ರಿಕೆಟ್ ಪ್ರೇಮಿಗಳೆಲ್ಲರೂ ಉಸಿರು ಬಗಿ ಹಿಡಿದು ಕೂತಿದ್ದರು. ಇನ್ನೇನು ಪಂದ್ಯ ನಮ್ಮ ಕೈಯಿಂದ ಜಾರಿ ಹೋಯಿತು ಅನ್ನುತ್ತಿರುವಾಗಲೇ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಧೋನಿ ತಮ್ಮ ಕೈಯಿಂದ್ ಗ್ಲೌಸ್ ತೆಗೆದಿದ್ದರು. ಅದು ಧೋನಿಯ ಮೈಂಡ್ ಗೇಮ್ ಮತ್ತು ಗೇಮ್ ಪ್ಲಾನಿಂಗ್ ಆಗಿತ್ತು.
ಕೊನೆಯ ಬಾಲ್ನಲ್ಲಿ ಶರವೇಗದಲ್ಲಿ ಸ್ಟಂಪಿಂಗ್ ಮಾಡುವ ಮೂಲಕ ಧೋನಿ ಭಾರತವನ್ನು ಸೋಲಿನ ದವಡೆಯಿಂದ ಹಿಡಿದೆಳೆದಿದ್ದರು. ಈ ಕೊನೆಯ ಕ್ಷಣದಲ್ಲಿ ಗ್ಲೌಸ್ ತೆಗೆದು ಸ್ಟಂಪಿಂಗ್ ಗಾಗಿ ರಣತಂತ್ರ ಹೂಡಿದ ಧೋನಿಯನ್ನು  ದೇವರ ಹಸ್ತ ಎಂದು ನೆಟಿಜನ್ ಗಳು ಕೊಂಡಾಡಿದ್ದಾರೆ.
ಬುಧವಾರ ನಡೆದ ಬಾಂಗ್ಲಾ ವಿರುದ್ಧ ರೋಚಕ ಪಂದ್ಯದ ಬಗ್ಗೆ ಸಾಮಾಜಿಕ ತಾಣದಲ್ಲಿ ತರಹೇವಾರಿ ಟ್ವೀಟ್ , ಪೋಸ್ಟ್ಗಳಿಂದ ಸಂಭ್ರಮಾಚರಣೆ ನಡೆದಿತ್ತು.
ಧೋನಿಯ ಈ ಅಂತಿಮ ಕ್ಷಣದ ನಿರ್ಧಾರಗಳ ಬಗ್ಗೆ ಎಲ್ಲೆಡೆ ಶ್ಲಾಘನೆ ಕಂಡು ಬಂದಿದ್ದು, ಇಂಡಿಯಾ - ಬಾಂಗ್ಲಾ, ಎಂಎಸ್ ಧೋನಿ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು. 
ನಾಯಕ ಮಹೇಂದ್ರ ಸಿಂಗ್ ಧೋನಿಯ ಸ್ಟಂಪಿಂಗ್ ವೇಗ, ರನೌಟ್ ಬಗ್ಗೆಯೇ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದರೆ, ಬಾಂಗ್ಲಾ ಟೀಂನ ಎಡವಟ್ಟುಗಳನ್ನು ಉಲ್ಲೇಖಿಸಿಯೂ ಹಲವಾರು ಟ್ವೀಟ್ ಗಳು ಹರಿದಾಡಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com