ಬಾಂಗ್ಲಾ ಕ್ರಿಕೆಟಿಗ ರೆಹ್ಮಾನ್‌ನ್ನು ಧೋನಿ ರನೌಟ್ ಮಾಡಿದ ಕ್ಷಣವನ್ನು ಮರುಸೃಷ್ಟಿಸಿದ ಕಾಮೆಂಟೇಟರ್‌ಗಳು

ಇದೀಗ ಆ ಐತಿಹಾಸಿಕ ಕ್ಷಣವನ್ನು ಕಾಮೆಂಟೇಟರ್‌ಗಳು ಮರುಸೃಷ್ಟಿ ಮಾಡಿದ್ದು, ಈ ವೀಡಿಯೋ ಕೂಡಾ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಕಾಮೆಂಟೇಟರ್ ಗಳು
ಕಾಮೆಂಟೇಟರ್ ಗಳು
ನವದೆಹಲಿ: ಕಳೆದ ವಾರ ಬಾಂಗ್ಲಾದೇಶ ಮತ್ತು ಭಾರತ ನಡುವೆ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ 1 ರನ್‌ನ ರೋಚಕ ಗೆಲವು ಸಾಧಿಸಿತ್ತು. ಪ್ರಸ್ತುತ ಪಂದ್ಯದ ಕೊನೆಯ ಓವರ್‌ನ ಕೊನೆಯ ಬಾಲ್‌ನಲ್ಲಿ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜೂರ್ ರೆಹ್ಮಾನ್‌ನ್ನು ಮಹೇಂದ್ರ ಸಿಂಗ್ ಧೋನಿ ರನೌಟ್ ಮಾಡಿದ್ದು ಆ ಪಂದ್ಯದ 'ಐಸಿಹಾಸಿಕ' ಕ್ಷಣವಾಗಿತ್ತು.
ಕ್ರಿಕೆಟ್ ಇತಿಹಾಸದಲ್ಲೇ ಅಷ್ಟೊಂದು ವೇಗವಾಗಿ ರನೌಟ್ ಮಾಡಿ ಪಂದ್ಯವನ್ನು ಸೋಲಿನ ದವಡೆಯಿಂದ ಹಿಡಿದೆಳೆದ ಧೋನಿಯ ಚಾಣಾಕ್ಷತನಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿತ್ತು. 
ಕೊನೆಯ ಓವರ್‌ನಲ್ಲಿ ಭಾರತ ಗೆಲವು ಸಾಧಿಸಿದ ಆ ದೃಶ್ಯಗಳು ಸಾಮಾಜಿಕ ತಾಣದಲ್ಲಿಯೂ ವೈರಲ್ ಆಗಿತ್ತು. ಇದೀಗ ಆ ಐತಿಹಾಸಿಕ ಕ್ಷಣವನ್ನು ಕಾಮೆಂಟೇಟರ್‌ಗಳು ಮರುಸೃಷ್ಟಿ ಮಾಡಿದ್ದು, ಈ ವೀಡಿಯೋ ಕೂಡಾ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಮಾಜಿ ಕ್ರಿಕೆಟ್ ಪಟುಗಳಾದ ಶೌನ್ ಪೊಲ್ಲಾಕ್, ಡ್ಯಾರೆನ್ ಗಂಗಾ, ನಿಕ್ಕ್ ನೈಟ್  ಮತ್ತು ರಸೆಲ್ ಅರ್ನಾಲ್ಡ್ ಈಗ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಕಾಮೆಂಟೇಟರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲ ಕಾಮೆಂಟೇಟರ್‌ಗಳು ಶುಕ್ರವಾರ ನಾಗ್ಪುರ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಪಂದ್ಯದ ನಂತರ ಕ್ರೀಸ್ ಗಿಳಿದು ಧೋನಿ- ಮುಸ್ತಾಫಿಜುರ್ ಕ್ಷಣವನ್ನು ಮರುಸೃಷ್ಟಿ ಮಾಡಿದ್ದಾರೆ. 
ಪೊಲ್ಲಾಕ್ ಹಾರ್ದಿಕ್ ಪಾಂಡ್ಯಾನ ಪಾತ್ರ ನಿರ್ವಹಿಸಿದ್ದು, ಕೊನೆಯ ಎಸೆತ ಎಸೆದಿದ್ದರು. ರುಸೆಲ್ ಅರ್ನಾಲ್ಡ್ ರೆಹ್ಮಾನ್ ಆ ಎಸೆತವನ್ನು ಎದುರಿಸಿದ್ದು, ನಿಕ್ ನೈಟ್ ರನ್ ಗಳಿಸುವ ಹಪಾಹಪಿಯಲ್ಲಿ ಡೇಂಜರ್ ಸ್ಥಾನಕ್ಕೆ ಓಡಿದ್ದರು.  ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಗಂಗಾ ಧೋನಿಯ ಪಾತ್ರ ನಿರ್ವಹಿಸಿ ರನೌಟ್ ಮಾಡಿದ್ದರು. 
ಪೊಲ್ಲಾಕ್ ಗರಬಡಿದವರಂತೆ ನೋಡುತ್ತಿದ್ದರೆ, ಗಂಗಾ ಧೋನಿ ಮಾಡಿದಂತೆ ನಟಿಸಿದರು. ಇತ್ತ ಸ್ಕ್ವಾರ್ ಲೆಗ್ ಅಂಪೈರ್ ಅಲೀಮ್ ಧಾರ್, ಅಲ್ಲಿ ಮೂರನೇ ಅಂಪೈರ್‌ಗಾಗಿ ಕೈ ಸನ್ನೆ ಮಾಡಿದ್ದೂ ಈ ಮರುಸೃಷ್ಟಿ ವೀಡಿಯೋದಲ್ಲಿದೆ.
ಕಾಮೆಂಟೇಟರ್‌ಗಳು ಮರುಸೃಷ್ಟಿ ಮಾಡಿದ ಈ ವಿಡೀಯೋವನ್ನು ಐಸಿಸಿ ತಮ್ಮ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಶೇರ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com