ನವದೆಹಲಿ: ವಿಶ್ವಕಪ್ ಟಿ20 ಪಂದ್ಯಾವಳಿಯ ಮೊದಲ ಸೆಮಿ ಫೈನಲ್ ಪಂದ್ಯ ದೆಹಲಿಯ ಐತಿಹಾಸಿಕ ಫಿರೋಜಾ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿದ್ದು, ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿ ಲ್ಯಾಂಡ್, ಸೆಮಿ ಫೈನಲ್ ಗೆಲ್ಲಲು ಇಂಗ್ಲೆಂಡ್ ಗೆ 154 ರನ್ ಗಳ ಟಾರ್ಗೆಟ್ ನೀಡಿದೆ.
ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದು ಚೊಚ್ಚಲ ವಿಶ್ವಕಪ್ ಟಿ20 ಗೆಲ್ಲುವ ವಿಶ್ವಾಸದಲ್ಲಿದರುವ ನ್ಯೂಜಿ ಲ್ಯಾಂಡ್, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153ರನ್ ಕಲೆ ಹಾಕಿದೆ.
ನ್ಯೂಜಿ ಲ್ಯಾಂಡ್ ಪರ ಕಾಲಿನ್ ಮುನ್ರೋ 46, ಕೇನ್ ವಿಲಿಯಮ್ಸನ್ 32, ಆಂಡರ್ಸನ್ 28, ಮಾರ್ಟಿನ್ ಗಫ್ಟಿಲ್ 15, ರೊಂಚಿ 3 ಹಾಗೂ ಗ್ರಾಂಟ್ ಎಲಿಯಟ್ ಔಟಾಗದೆ 4 ರನ್ ಗಳಿಸಿದ್ದಾರೆ.
ಇನ್ನು ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ಮಾಡಿದ ಬೆನ್ ಸ್ಟೋಕ್ಸ್ 3 ವಿಕೆಟ್ ಪಡೆದಿದ್ದಾರೆ.
2010ರ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಹೋಲಿಸಿದರೆ, ನ್ಯೂಜಿಲೆಂಡ್ ಫೇವರಿಟ್ ತಂಡವಾಗಿ ಗೋಚರಿಸಿದೆ. ಈವರೆಗೂ 13 ಟಿ20 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ನ್ಯೂಜಿಲೆಂಡ್ 4ರಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್ 8ರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ದುಗೊಂಡಿದೆ.