ಸಂಪೂರ್ಣ ಸೋಲಾರ್ ಮಯವಾದ ಚಿನ್ನಸ್ವಾಮಿ ಕ್ರೀಡಾಂಗಣ!

ರಾಜ್ಯ ಕ್ರಿಕೆಟ್ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ದೊರೆತಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಇದೀಗ ಸೋಲಾರ್ ಮಯವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣ (ಸಂಗ್ರಹ ಚಿತ್ರ)
ಚಿನ್ನಸ್ವಾಮಿ ಕ್ರೀಡಾಂಗಣ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜ್ಯ ಕ್ರಿಕೆಟ್ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ದೊರೆತಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಇದೀಗ ಸೋಲಾರ್ ಮಯವಾಗಿದೆ.

ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಹಗಲುರಾತ್ರಿ ಪಂದ್ಯದಿಂದಾಗಿ ಅಪಾರ ಪ್ರಮಾಣದ ವಿದ್ಯುತ್ ಪೋಲಾಗುತ್ತಿದೆ ಎಂದು ಆರೋಪಕ್ಕೆ ಸೋಲಾರ್ ಮೂಲಕ ಉತ್ತರ ನೀಡಿರುವ ಕೆಎಸ್  ಸಿಎ, ಕ್ರೀಡಾಂಗಣದಾದ್ಯಂತ ಗ್ಯಾಲರಿಗಳ ಮೇಲೆ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸುವ ಮೂಲಕ ತನ್ನದೇ ಸೋಲಾರ್ ಇಂಧನ ಹೊಂದಿದ ದೇಶದ ಮೊದಲ ಕ್ರೀಡಾಂಗಣ ಎಂಬ  ಖ್ಯಾತಿಗೆ ಪಾತ್ರವಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಯೋಜನೆ ವರ್ಷದ ಹಿಂದೆಯೇ ಆರಂಭವಾಯಿತಾದರೂ ಆಗ ಕೆಲ ಆಯ್ದ ಭಾಗದಲ್ಲಿ ಮಾತ್ರ ಸೋಲಾರ್ ಪ್ಯಾನಲ್  ಅಳವಡಿಸಲಾಗಿತ್ತು. ಇದು ಯಶಸ್ವಿಯಾದ ಹಿನ್ನಲೆಯಲ್ಲಿ ಇದೀಗ ಇದರ ವ್ಯಾಪ್ತಿಯನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಿಸ್ತರಿಸಲಾಗಿದ್ದು, ಪೂರ್ವಭಾಗದಲ್ಲಿ ಅಳವಡಿಸಲಾಗಿದ್ದ ಪ್ಯಾನಲ್  ಗಳನ್ನು ಇದೀಗ ಪಶ್ಚಿಮ ಭಾಗಕ್ಕೂ ವಿಸ್ತರಿಸಲಾಗಿದೆ. ಇದರಿಂದ ಸೋಲಾರ್ ಮೂಲಕ ಕ್ರೀಡಾಂಗಣಕ್ಕೆ ಪೂರೈಕೆಯಾಗುತ್ತಿದ್ದ ವಿಧ್ಯುತ್ ಪ್ರಮಾಣ ಹೆಚ್ಚಾಗಿದ್ದು, ಇದೀಗ ಕ್ರೀಡಾಂಗಣದಲ್ಲಿ  ಬಹುತೇಕ ಕ್ರೀಡಾಂಗಣದ ಎಲ್ಲ ಚಟುವಟಿಕೆಗಳಿಗಾಗಿ ಸೋಲಾರ್ ವಿದ್ಯುತ್ ಅನ್ನೇ ಅವಲಂಬಿಸಲಾಗಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಸಾಂಪ್ರದಾಯಿಕ ಮೂಲದ ವಿದ್ಯುತ್ ಬಳಕೆ  ಮಾಡಲಾಗುತ್ತಿದೆ ಎಂಜು ಕ್ರೀಡಾಂಗಣದ ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಸಂಪೂರ್ಣ ಸೋಲಾರ್ ಮಯವಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣ ಇಂತಹ ಪರ್ಯಾಯ ವ್ಯವಸ್ಥೆ ಒಳಗೊಂಡ ವಿಶ್ವದ ಏಕೈಕ ಕ್ರಿಕೆಟ್ ಮೈದಾನ ಎಂಬ ಹಿರಿಮೆಗೂ ಪಾತ್ರವಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್ ಸಿಎ, ಪ್ರತೀ ವರ್ಷ ವಿದ್ಯುತ್ ಗಾಗಿಯೇ 1ರಿಂದ 1.2 ಕೋಟಿ ವೆಚ್ಚವಾಗುತ್ತಿತ್ತು. ಪ್ರತೀ ವರ್ಷ ಅಂದಾಜು 16 ಯೂನಿಟ್ ವಿದ್ಯುತ್ ಕ್ರೀಡಾಂಗಣಕ್ಕೆ ಬೇಕಿತ್ತು.  ಹೀಗಾಗಿ ಕ್ರೀಡಾಂಗಣಕ್ಕೆ ಸೋಲಾರ್ ಪ್ಯಾನಲ್ ಅಳವಡಿಸಲು ನಿರ್ಧರಿಸಲಾಯಿತು. ಸುಮಾರು 4.5 ಕೋಟಿ ರು. ವೆಚ್ಚದಲ್ಲಿ ಇಡೀ ಕ್ರೀಡಾಂಗಣಕ್ಕೆ ಸೋಲಾರ್ ಶಕ್ತಿ ಅಳವಡಿಸಲಾಗಿದೆ.  ಮುಂದಿನ ದಿನಗಳಲ್ಲಿ ಹೈವೋಲ್ಟೇಜ್ ಹೊಂದಿರುವ ಫ್ಲಡ್ ಲೈಟ್‌ಗಳಿಗೂ ಸೋಲಾರ್ ಶಕ್ತಿ ಬಳಸುವ ಕುರಿತು ಕಾರ್ಯ ಪ್ರವೃತ್ತರಾಗಿದ್ದೇವೆ. ಪರಿಸರ ಸ್ನೇಹಿ ಕ್ರೀಡಾಂಗಣ ರೂಪಿಸುವುದರ ಜತೆಗೆ  ವಿದ್ಯುತ್ ಬಳಕೆ ಕಡಿಮೆ ಮಾಡುವುದು ನಮ್ಮ ಆದ್ಯ ಧ್ಯೇಯವಾಗಿದೆ ಎಂದು ತಿಳಿಸಿದೆ.

ಪ್ರಸ್ತುತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫ್ಲಡ್ ಲೈಟ್ ಹೊರತುಪಡಿಸಿ 4.1 ಮೆಗಾ ವಾಟ್ ಸೋಲಾರ್ ಶಕ್ತಿ ಘಟಕವನ್ನು ಬಳಸಲಾಗುತ್ತಿದೆ. ಪರಿಪೂರ್ಣ ಸೋಲಾರ್ ಶಕ್ತಿ ಹೊಂದಿರುವ  ಜರ್ಮನಿಯ ಫ್ರೀಬರ್ಗ್ ಫುಟ್ಬಾಲ್ ಕ್ರೀಡಾಂಗಣದಿಂದ ಸ್ಫೂರ್ತಿಯುತಗೊಂಡು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 3.8 ಕೋಟಿ ರೂಪಾಯಿ ವೆಚ್ಚದಲ್ಲಿ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.  ಕಳೆದ ಫೆಬ್ರವರಿಯಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದ್ದ ಎಂಆರ್-ಟಿಇಕೆ ಕಂಪನಿ ಮಂಗಳವಾರವಷ್ಟೇ ಈ ಕಾರ್ಯವನ್ನು ಪೂರ್ಣಗೊಳಿಸಿದೆ. ಸೋಲಾರ್ ಪ್ಯಾನಲ್ ಅಳವಡಿಕೆಯಿಂದಾಗಿ 12ಲಕ್ಷ  ಯೂನಿಟ್ ವಿದ್ಯುತ್ ಉಳಿತಾಯವಾಗುತ್ತಿದ್ದು, ಪ್ರಸ್ತುತ ಕೆಎಸ್‌ಸಿಎ, ಇಡೀ ಕ್ರೀಡಾಂಗಣಕ್ಕಾಗಿ ವಾರ್ಷಿಕ 18 ಲಕ್ಷ ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದೆ. ಆದರೆ ಇದೀಗ ಸೋಲಾರ್  ಅಳವಡಿಕೆಯಿಂದ ವಿದ್ಯುತ್ ಬಳಕೆ 6 ಲಕ್ಷ ಯೂನಿಟ್‌ಗೆ ತಗ್ಗಲಿದೆ ಎನ್ನಲಾಗಿದೆ. ಹೀಗಾಗಿ ಯಾವುದೇ ಹೆಚ್ಚುವರಿ ಉಳಿತಾಯದ ವಿದ್ಯುತ್ ಅನ್ನು ಬೆಂಗಳೂರು ವಿದ್ಯುತ್ ಪೂರೈಕೆ ಕೊ ಗ್ರಿಡ್‌ಗೆ  ಮಾರಾಟ ಮಾಡಬಹುದಾಗಿದೆ ಎಂದು ಕೆಎಸ್ ಸಿಎ ತಿಳಿಸಿದೆ.

ಈ ಬಗ್ಗೆ ಮಾತನಾಡಿರುವ ಕೆಎಸ್ ಸಿಎ ವಕ್ತಾರ ವಿನಯ್ ಅವರು, 2015ರ ಏಪ್ರಿಲ್ ನಲ್ಲಿ ಆರಂಭವಾದ ಕ್ರೀಡಾಂಗಣದ ಸೋಲಾರ್ ಘಟಕ ಈ ವರೆಗೂ 6,18,000 ಕಿ.ವ್ಯಾ ವಿದ್ಯುತ್ ಉತ್ಪಾದಿಸಿದ್ದು,   ಕೇವಲ 50 ದಿನದಲ್ಲಿ ಇಡೀ ಕ್ರೀಡಾಂಗಣಕ್ಕೆ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಲಾಗಿದೆ. ಸೋಲಾರ್ ಬಳಕೆಯಿಂದಾಗಿ ಸಾಂಪ್ರದಾಯಿತ ವಿದ್ಯುತ್ ಮೂಲದ ಅವಲಂಬನೆ ಕಡಿತವಾಗಿದೆ  ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com