

ಕೋಲ್ಕತ್ತಾ: ಐಪಿಎಲ್ 9ನೇ ಆವೃತ್ತಿಯಲ್ಲಿ ಮಂಕಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದು ಕೆಕೆಆರ್ ವಿರುದ್ಧ 9 ವಿಕೆಟ್ ಗಳಿಂದ ಜಯಗಳಿಸಿದೆ.
ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿದ್ದರು. ಈ ಮೊತ್ತ ಬೆನ್ನಟ್ಟಿದ ಆರ್ಸಿಬಿ ಪರ ಕ್ರಿಸ್ ಗೇಯ್ಲ್(49), ವಿರಾಟ್ ಕೊಹ್ಲಿ(ಅಜೇಯ 75) ಹಾಗೂ ಎಬಿಡಿ ವಿಲಿಯರ್ಸ್ ಅಜೇಯ 59 ರನ್ ಗಳ ನೆರವಿನಿಂದಾಗಿ ಆರ್ಸಿಬಿ 9 ವಿಕೆಟ್ ಗಳಿಂದ ಜಯಗಳಿಸಿದೆ.
ಕೆಕೆಆರ್ ಪರ ರಾಬಿನ್ ಉತ್ತಪ್ಪ 2, ಗೌತಮ್ ಗಂಭೀರ್ 51, ಮನಿಷ್ ಪಾಂಡ್ಯೆ 50, ಪಠಾನ್ 6, ರಸೂಲ್ ಅಜೇಯ 39, ಯಾದವ್ 5 ಹಾಗೂ ಶಕೀಬ್ ಅಲ್ ಹಸನ್ ಅಜೇಯ 18 ರನ್ ಗಳಿಸಿದ್ದಾರೆ.
ಆರ್ಸಿಬಿ ಪರ ಅರವಿಂದ್ 2, ಇಕ್ಬಾಲ್ ಅಬ್ದುಲ್ಲಾ ಹಾಗೂ ಚಲಾಲ್ ತಲಾ 1 ವಿಕೆಟ್ ಪಡೆದಿದ್ದಾರೆ.