ಐಪಿಎಲ್ 2016: ಲಯನ್ಸ್ ವಿರುದ್ಧ ಗೆದ್ದ ಹೈದರಾಬಾದ್ ಫೈನಲ್ ಗೆ ಎಂಟ್ರಿ

ಐಪಿಎಲ್ 9ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಗೆ ಎಂಟ್ರಿ ನೀಡಿದ್ದು, ರಾಯಲ್...
ಸನ್ ರೈಸರ್ಸ್ ಹೈದರಾಬಾದ್
ಸನ್ ರೈಸರ್ಸ್ ಹೈದರಾಬಾದ್
Updated on: 

ಐಪಿಎಲ್ 9ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಗೆ ಎಂಟ್ರಿ ನೀಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಲಿದೆ.

ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರ ಅಜೇಯ 93 ರನ್ ಗಳಿಂದಾಗಿ ಹೈದರಾಬಾದ್ ತಂಡ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿದೆ.

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ ತಂಡದ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್ ಗಳ ಗುರಿ ನೀಡಿತು. 163 ರನ್ ಗಳ ಬೆನ್ನಟ್ಟಿದ ಹೈದರಾಬಾದ್ ತಂಡ 19.2 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್ ಸಿಡಿಸಿ ಗೆಲುವಿನ ನಗೆ ಬೀರಿತು.

ಹೈದರಾಬಾದ್ ಪರ ಡೇವಿಡ್ ವಾರ್ನರ್ ಅಜೇಯ 93, ಶಿಖರ್ ಧವನ್ 0, ಹೆನ್ರಿಕ್ಸ್ 11, ಯುವರಾಜ್ ಸಿಂಗ್ 8, ಹೂಡಾ 4, ಕಟ್ಟಿಂಗ್ 8, ಓಜಾ 10 ಬಿಫುಲ್ ಶರ್ಮಾ ಅಜೇಯ 27 ರನ್ ಗಳಿಸಿದ್ದಾರೆ.

ಗುಜರಾತ್ ಲಯನ್ಸ್ ಪರ ಬ್ರಾವೋ, ಕೌಶಿಕ್ ತಲಾ 2 ವಿಕೆಟ್ ಪಡೆದಿದ್ದಾರೆ.

ಗುಜರಾತ್ ಲಯನ್ಸ್ ಪರ ದ್ವೀವೇದಿ 5, ಮೆಕ್ಕಲಂ 32, ರೈನಾ 1, ಕಾರ್ತಿಕ್ 26, ಫಿಂಚ್ 50, ಸ್ಮಿತ್ 1, ಜಡೇಜಾ 19, ಬ್ರಾವೋ 20 ರನ್ ಗಳಿಸಿದ್ದಾರೆ.

ಹೈದರಾಬಾದ್ ಪರ ಭುವನೇಶ್ವರ್ ಕುಮಾರ್, ಕಟ್ಟಿಂಗ್ ತಲಾ 2 ವಿಕೆಟ್ ಪಡೆದರೆ, ಬೌಲ್ಟ್ ಬಿಫುಲ್ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com