ಮಳೆಗೆ ಸೆಡ್ಡುಹೊಡೆಯಲಿರುವ "ಚಿನ್ನಸ್ವಾಮಿ" ತಿಂಗಳಲ್ಲಿ ಸಿದ್ಧ!

ಕ್ರೀಡಾಂಗಣದ ಮಳೆ ನೀರನ್ನು ವೇಗವಾಗಿ ಒಣಗಿಸಬಲ್ಲ ಕ್ರಾಂತಿಕಾರಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ವಿಶ್ವದ ಮೊದಲ ಕ್ರೀಡಾಂಗಣವೆಂಬ ಖ್ಯಾತಿ ಪಾತ್ರವಾಗಲಿರುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ತಿಂಗಳಲ್ಲಿ ಆಟಕ್ಕೆ ಸಿದ್ಧವಾಗಲಿದೆ ಎಂದು ತಿಳಿದುಬಂದಿದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣ (ಸಂಗ್ರಹ ಚಿತ್ರ)
ಎಂ ಚಿನ್ನಸ್ವಾಮಿ ಕ್ರೀಡಾಂಗಣ (ಸಂಗ್ರಹ ಚಿತ್ರ)

ಬೆಂಗಳೂರು: ಕ್ರೀಡಾಂಗಣದ ಮಳೆ ನೀರನ್ನು ವೇಗವಾಗಿ ಒಣಗಿಸಬಲ್ಲ ಕ್ರಾಂತಿಕಾರಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ವಿಶ್ವದ ಮೊದಲ ಕ್ರೀಡಾಂಗಣವೆಂಬ ಖ್ಯಾತಿ ಪಾತ್ರವಾಗಲಿರುವ  ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ತಿಂಗಳಲ್ಲಿ ಆಟಕ್ಕೆ ಸಿದ್ಧವಾಗಲಿದೆ ಎಂದು ತಿಳಿದುಬಂದಿದೆ.

ವಿಶ್ವ ಕ್ರಿಕೆಟ್ ರಂಗದಲ್ಲಿ ಕರ್ನಾಟಕ ಹಾಗೂ ಭಾರತದ ಹಿರಿಮೆ ಪಾತ್ರವಾಗಲಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಇನ್ನೊಂದು ತಿಂಗಳಲ್ಲಿ ಆಟಕ್ಕೆ ಸಜ್ಜಾಗಲಿದ್ದು, ಕ್ರೀಡಾಂಗಣದಲ್ಲಿ  ನಡೆಯುತ್ತಿರುವ ಅತ್ಯಾಧುನಿಕ ಸಬ್ ಏರ್ ವ್ಯವಸ್ಥೆ ಅಳವಡಿಸುವ ಕಾರ್ಯ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ವ್ಯವಸ್ಥೆ  ಅಳವಡಿಸುವ ಕಾರ್ಯ ಈಗಾಗಲೇ ಶೇ.80ರಷ್ಟು ಪೂರ್ಣಗೊಂಡಿದ್ದು, ಶೇ.ರಷ್ಟು ಕಾರ್ಯ ಮಾತ್ರ ಬಾಕಿ ಉಳಿದಿದೆ.

ಇನ್ನು ಕೆಲವೇ ದಿನಗಳಲ್ಲಿ ಈ ಕಾರ್ಯ ಕೂಡ ಪೂರ್ಣಗೊಳ್ಳಲ್ಲಿದ್ದು, ಬಳಿಕ ಸಣ್ಣ ಪುಟ್ಟ ಕೆಲಸಗಳು ನಡೆಯಲಿವೆ. ಈ ಎಲ್ಲ ಕಾರ್ಯಗಳ ಬಳಿಕ ಕೆಎಸ್ ಸಿಎ ಕಾಮಗಾರಿ ಪೂರ್ಣಗೊಂಡ ಕುರಿತು  ಮಾಹಿತಿ ನೀಡಲಿದೆ. ಬಳಿಕ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿದ್ದು, ದೇಶಿ ಪಂದ್ಯಗಳ ಮೂಲಕ ನೂತನ ವ್ಯವಸ್ಥೆ ಅಳವಡಿಸಿಕೊಂಡ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅನ್ನು  ಆರಂಭಿಸಲಾಗುತ್ತದೆ ಎಂದು ಕೆಎಸ್ ಸಿಎ ಮೂಲಗಳು ತಿಳಿಸಿವೆ.

ಬಳಿಕ ಮುಂಬರುವ ಫೆಬ್ರವರಿನಲ್ಲಿ ಭಾರತ-ಇಂಗ್ಲೆಂಡ್‌ ನಡುವಿನ ಟಿ20 ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದು ಸಬ್ ಏರ್ ವ್ಯವಸ್ಥೆ ಅಳವಡಿಸಿಕೊಂಡ ಬಳಿಕ ನಡೆಯುತ್ತಿರುವ  ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ. ಅನಂತರ ಆಸ್ಟ್ರೇಲಿಯ ವಿರುದ್ಧ ಟೆಸ್ಟ್‌ ಪಂದ್ಯಕ್ಕೂ ಚಿನ್ನಸ್ವಾಮಿ ಆತಿಥ್ಯ ವಹಿಸಲಿದೆ ಎಂದು ತಿಳಿದುಬಂದಿದೆ.

ಸಬ್ ಏರ್ ವ್ಯವಸ್ಥೆಗೂ ಮೊದಲು ಕ್ರೀಡಾಂಗಣದ ಹೊರಾಂಗಣದಲ್ಲಿನ ನೀರನ್ನು ಹೊರಹಾಕುವ ವ್ಯವಸ್ಥೆ ಇರಲ್ಲಿಲ್ಲ. ಕ್ರೀಡಾಂಗಣದಲ್ಲಿರುವ ಏಕೈಕ ಸೂಪರ್ ಸಾಪರ್ ಮೂಲಕ ನಿಗದಿತ  ಸಮಯದಲ್ಲಿ ನೀರನ್ನು ಹೊರಹಾಕುವುದು ಅಸಾಧ್ಯವಾಗಿತ್ತು. ಆದರೆ ಅಮೆರಿಕ ತಂತ್ರಜ್ಞಾನದ ಮೂಲಕ ಮೈದಾನದಲ್ಲಿ ಬಿದ್ದ ನೀರನ್ನು ವ್ಯಾಕ್ಯೂಮ್ ವ್ಯವಸ್ಥೆಯ ಮೂಲಕ ಪೈಪ್ ಗಳಲ್ಲಿ ಸಾಗಿಸಿ  ಒಳಚರಂಡಿ ಸೇರುವಂತೆ ಮಾಡಲಾಗಿದೆ. ಇದರಿಂದ ಮಳೆ ನಿಂತ ಕೆಲವೇ ಕ್ಷಣಗಳಲ್ಲಿ ಮೈದಾನ ಮತ್ತೆ ಆಟಕ್ಕೆ ಸಿದ್ಧಗೊಳ್ಳುತ್ತದೆ.

ಇಂತಹ ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡ ವಿಶ್ವ ಮೊದಲ ಕ್ರಿಕೆಟ್ ಕ್ರೀಡಾಂಗಣ ಎಂಬ ಹಿರಿಮೆಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಪಾತ್ರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com