2 ಎಸೆತದಲ್ಲಿ 18 ರನ್ ಸಿಡಿಸಿದ ಕನ್ನಡಿಗ ಮನೀಶ್ ಪಾಂಡೆ; ಅದು ಹೇಗೆ ಅಂತೀರಾ!

ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ಕನ್ನಡಿಗ ಮನೀಶ್ ಪಾಂಡೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 2 ಎಸೆತದಲ್ಲಿ 18 ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ...
ಮನೀಶ್ ಪಾಂಡೆ
ಮನೀಶ್ ಪಾಂಡೆ
Updated on: 
ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ಕನ್ನಡಿಗ ಮನೀಶ್ ಪಾಂಡೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 2 ಎಸೆತದಲ್ಲಿ 18 ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ. 
ಕೆಕೆಆರ್ ವೇಗಿ ಮೆಕ್ಲೀನಘನ್ ಅವರು 20ನೇ ಓವರ್ ಬೌಲಿಂಗ್ ಮಾಡಿದರು. ಈ ವೇಳೆ ಸ್ಟ್ರೇಕ್ ನಲ್ಲಿದ್ದ ಮನೀಶ್ ಪಾಂಡೆ ಮೊದಲ ಎಸೆತವನ್ನು ಲೆಗ್ ಸೈಡ್ ನಲ್ಲಿ ಸಿಕ್ಸರ್ ಬಾರಿಸಿದರು. ಎರಡನೇ ಎಸೆತ ನೋಬಾಲ್ ಆಗಿದ್ದು ಈ ಎಸೆತದಲ್ಲಿ ಮನೀಶ್ ಬೌಂಡರಿ ಬಾರಿಸಿದರು. ಇದರದೊಂದಿಗೆ ಪಾಂಡೆಗೆ ಫ್ರೀ ಹಿಟ್ ಸಿಗುತ್ತದೆ. ಅಂತೆ ಫ್ರೀ ಹಿಟ್ ಬಾಲ್ ಅನ್ನು ಮೆಕ್ಲೀನಘನ್ ವೈಡ್ ಎಸೆಯುತ್ತಾರೆ. ನಂತರ ಫ್ರೀ ಹಿಟ್ ಎಸೆತವನ್ನು ಮನೀಷ್ ಸಿಕ್ಸರ್ ಬಾರಿಸುವ ಮೂಲಕ 2 ಎಸೆತದಲ್ಲಿ 18 ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ. 
ಈ ಪಂದ್ಯದಲ್ಲಿ ಮನೀಶ್ ಪಾಂಡೆ 47 ಎಸೆತಗಳಲ್ಲಿ 81 ರನ್ ಸಿಡಿಸಿದ್ದರು. ಇದರಲ್ಲಿ 5 ಸಿಕ್ಸರ್ ಮತ್ತು 5 ಬೌಂಡರಿ ಒಳಗೊಂಡಿತ್ತು. ಇಂತಹ ಅದ್ಭುತ ಆಟ ಪ್ರದರ್ಶಿಸಿದರು ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com