ಜಹೀರ್ ಖಾನ್ ನಿಶ್ಚಿತಾರ್ಥ: ಟ್ವಿಟ್ಟರ್ ನಲ್ಲಿ ಶುಭಾಶಯ ಹೇಳುವಾಗ ಅನಿಲ್ ಕುಂಬ್ಳೆ ಯಡವಟ್ಟು

ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕ, ಭಾರತದ ಮಾಜಿ ಕ್ರಿಕೆಟಿಗ ಜಹೀರ್‌ ಖಾನ್‌, ಬಾಲಿವುಡ್‌ ನಟಿ ಸಾಗರಿಕಾ ಘಾಟ್ಗೆ ಜೊತೆ ನಿಶ್ಚಿತಾರ್ಥದ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ..
ಅನಿಲ್  ಕುಂಬ್ಳೆ
ಅನಿಲ್ ಕುಂಬ್ಳೆ
Updated on
ನವದೆಹಲಿ:  ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕ, ಭಾರತದ ಮಾಜಿ ಕ್ರಿಕೆಟಿಗ ಜಹೀರ್‌ ಖಾನ್‌, ಬಾಲಿವುಡ್‌ ನಟಿ ಸಾಗರಿಕಾ ಘಾಟ್ಗೆ  ಜೊತೆ ನಿಶ್ಚಿತಾರ್ಥದ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು.
ಈ ಜೋಡಿಗೆ ಹಲವು  ಸಿನಿಮಾ ತಾರೆಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತ ತಂಡದ ಪ್ರಧಾನ ಕೋಚ್‌ ಅನಿಲ್‌ ಕುಂಬ್ಳೆ ಟ್ವಿಟರ್‌ನಲ್ಲಿ ಜಹೀರ್‌ ಜೋಡಿಗೆ ಶುಭಹಾರೈಕೆಗಳನ್ನು ಕೋರುವಾಗ ಯವಟ್ಟು ಮಾಡಿ ಮುಜುಗರಕ್ಕೆ ಒಳಗಾಗಿದ್ದಾರೆ.
ಸಾಗರಿಕಾ ಘಾಟ್ಗೆ ಬದಲಿಗೆ, ಕುಂಬ್ಳೆ ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್‌ ಅವರ ಹೆಸರು ಟ್ಯಾಗ್ ಮಾಡಿದ್ದರು, ತಪ್ಪಿನ ಅರಿವಾದ ಕೂಡಲೇ ಕುಂಬ್ಳೆ ಹಳೆ ಟ್ವೀಟನ್ನು ತೆಗೆದು ಹಾಕಿ, ಹೊಸದಾಗಿ ಶುಭಾಶಯ ಸಂದೇಶ ಬರೆದಿದ್ದಾರೆ. ಕುಂಬ್ಳೆ ಮಾತ್ರವಲ್ಲ, ಡೆಲ್ಲಿ ಡೇರ್ ಡೆವಿಲ್ಸ್‌ ತಂಡದ ಅಧಿಕೃತ ಟ್ವಿಟರ್‌ ಪುಟದಲ್ಲೂ ಇದೇ ರೀತಿಯ ತಪ್ಪಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com