ನವದೆಹಲಿ: ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು ಕೋಟ್ಲಾ ಮೈದಾನ ಭಾರತೀಯ ಸ್ಪಿನ್ನರ್ ಗಳ ಕೈ ಹಿಡಿಲಿಲ್ಲ ಎಂದು ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಹೇಳಿದ್ದಾರೆ.
ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡ ಲಂಕಾ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಪಂದ್ಯ ಗೆಲುವಿಲಿಗಾಗಿ ಇನ್ನು ಏಳು ವಿಕೆಟ್ ಮಾತ್ರ ಬಾಕಿ ಇತ್ತು. ಐದನೇ ದಿನದಾಟದಲ್ಲಿ ಲಂಕಾವನ್ನು ಆಲ್ಔಟ್ ಮಾಡುವ ಮೂಲಕ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿ ಕೊಹ್ಲಿ ಪಡೆ ಇತ್ತು. ಆದರೆ ಭಾರತೀಯ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾರ ಸ್ಪಿನ್ ಜಾದು ಕೋಟ್ಲಾ ಅಂಗಳದಲ್ಲಿ ನಡೆಯಲಿಲ್ಲ ಹೀಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು ಎಂದು ಪೂಜಾರ ಹೇಳಿದ್ದಾರೆ.
ಐದನೇ ದಿನದಾಟದಲ್ಲಿ ಅಶ್ವಿನ್(35 ಓವರ್, 1/126) ಮತ್ತು ಜಡೇಜಾ(38 ಓವರ್, 1/81) 103 ಓವರ್ ಗಳ ಪೈಕಿ ಇವರಿಬ್ಬರೇ 73 ಓವರ್ ಗಳನ್ನು ಮಾಡಿದ್ದರು ಅವರಿಬ್ಬರಿಗೆ ವಿಕೆಟ್ ಬೀಳಲಿಲ್ಲ ಎಂದು ಪೂಜಾರ ಹೇಳಿದರು.
ಭಾರತದ ಪರ ಇವರಿಬ್ಬರು ಪಡೆದಿರುವ ವಿಕೆಟ್ ಗಳ ಸಂಖ್ಯೆ ನೋಡಿದರೇ ಅದು ಗಮನಾರ್ಹ. ಇನ್ನು ಸ್ವದೇಶಿ ಪಿಚ್ ಗಳಲ್ಲಿ ಅವರ ಸ್ಪಿನ್ ದಾಳಿ ಮಾರಕವಾಗಿರುತ್ತದೆ. ಇನ್ನು ಐದನೇ ದಿನದಾಟದಲ್ಲಿ ಪಿಚ್ ಗಳು ಸ್ಪಿನ್ನರ್ ಗಳಿಗೆ ಹೆಚ್ಚು ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವು ಆದರೆ ನಿನ್ನೆ ನಡೆದದ್ದೆ ಬೇರೆ ಎಂದು ಪೂಜಾರ ಹೇಳಿದ್ದಾರೆ.
ಸಾಗರೋತ್ತರ ಸರಣಿಗಳಲ್ಲಿ ಪರಿಣಿತ ಸ್ಲಿಲ್ಪ್ ಫೀಲ್ಡರ್ ಗಳ ಬಳಕೆ!
ಟೀಂ ಇಂಡಿಯಾದಲ್ಲಿ ಸ್ಲಿಲ್ಪ್ ಫೀಲ್ಡರ್ ಗಳ ಕೊರತೆ ಇದೆ. ಸ್ಲಿಲ್ಪ್ ನಲ್ಲಿ ಹೆಚ್ಚು ಕ್ಯಾಚ್ ಗಳನ್ನು ಕೈಚೆಲ್ಲುವುದರಿಂದ ನಾವು ಹೆಚ್ಚು ಬೆಲೆ ಕಟ್ಟಬೇಕಾಗಿ ಬಂದಿದೆ. ಇದರಿಂದಾಗಿ ಸಾಗರೋತ್ತರ ಸರಣಿಗಳಲ್ಲಿ ಪರಿಣಿತಿ ಹೊಂದಿರುವ ಸ್ಲಿಲ್ಪ್ ಫೀಲ್ಡರ್ ಗಳನ್ನು ನಿಲ್ಲಿಸುತ್ತೇವೆ ಎಂದು ಚೇತೇಶ್ವರ ಪೂಜಾರ ಹೇಳಿದ್ದಾರೆ.