ಮಗಳ ಜೊತೆ ಮಗುವಾದ ಧೋನಿ: ಅಪ್ಪ-ಮಗಳ ಅಂಬೆಗಾಲಿನ ಆಟದ ವಿಡಿಯೋ ವೈರಲ್

ಮೈದಾನದಲ್ಲಿ ಎಂತಹುದ್ದೇ ಪರಿಸ್ಥಿತಿ ಇದ್ದರೂ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದೆ ಕೂಲ್ ಆಗಿಯೇ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದ ಟೀಂ ಇಂಡಿಯಾ ಆಟಗಾರ ಮನೆಯಲ್ಲಿಯೂ ಕೂಲ್ ಆಗಿರುತ್ತಾರೆಂಬುದಕ್ಕೆ ಈ ವಿಡಿಯೋವೊಂದು ಸಾಕ್ಷಿಯಾಗಿದೆ...
ಮಗಳ ಜೊತೆ ಮಗುವಾದ ಧೋನಿ
ಮಗಳ ಜೊತೆ ಮಗುವಾದ ಧೋನಿ
Updated on

ನವದೆಹಲಿ: ಮೈದಾನದಲ್ಲಿ ಎಂತಹುದ್ದೇ ಪರಿಸ್ಥಿತಿ ಇದ್ದರೂ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದೆ ಕೂಲ್ ಆಗಿಯೇ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದ ಟೀಂ ಇಂಡಿಯಾ ಆಟಗಾರ ಮನೆಯಲ್ಲಿಯೂ ಕೂಲ್ ಆಗಿರುತ್ತಾರೆಂಬುದಕ್ಕೆ ಈ ವಿಡಿಯೋವೊಂದು ಸಾಕ್ಷಿಯಾಗಿದೆ.

ಟೀಂ ಇಂಡಿಯಾದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಧೋನಿ ಮತ್ತಷ್ಟು ಕೂಲ್ ಆಗಿದ್ದಾರೆ. ಮಗಳು ಝೀವಾ ಜೊತೆ ಧೋನಿ ತಾವೂ ಕೂಡ ಮಗುವಾಗಿ ಕಾಲ ಕಳೆಯುತ್ತಿದ್ದಾರೆ.

ಸಾಮಾನ್ಯವಾಗಿ ಧೋನಿ ತಮ್ಮ ಖಾಸಗಿ ಜೀವನವನ್ನು ಬಹಿರಂಗಪಡಿಸುತ್ತಿರಲಿಲ್ಲ. ಆದರೆ ಮಗಳು ಝೀವಾ ಹುಟ್ಟಿದ ಬಳಿಗ ಆಗಾಗ ಮಗಳ ಜೊತೆಗಿನ ಫೋಟೋ ಹಾಗೂ ವಿಡಿಯೋಗಳನ್ನು ಅಪ್'ಲೋಡ್ ಮಾಡಲು ಆರಂಭಿಸಿದ್ದಾರೆ. ಇದೀಗ ಅಂತಹದ್ದೇ ವಿಡಿಯೋವೊಂದನ್ನು ಧೋನಿ ಸಾಮಾಜಿಕ ಜಾಲತಾಣ ಇನ್'ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಹುಲ್ಲು ಹಾಸಿನ ಮೇಲೆ ಮಗಳ ಜೊತೆ ಮಗುವಾಗಿರುವ ಮಹೇಂದ್ರ ಸಿಂಗ್ ಧೋನಿ, ಝೀವಾ ಹುಲ್ಲು ಹಾಸಿನ ಮೇಲೆ ತೆವಳುತ್ತಿದ್ದರೆ, ಮಗಳ ಹಿಂದೆ ತಾವೂ ಕೂಡ ತೆವಳಿ ಮಗುವಿನಂತೆ ಸಖತ್ ಎಂಜಾಯ್ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

A post shared by @mahi7781 on

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com