ಅಶ್ವಿನ್ ಬೌಲಿಂಗ್ ವಿಭಾಗದ ಬ್ರಾಡ್ಮನ್: ಆಸಿಸ್ ಮಾಜಿ ನಾಯಕ ಸ್ಟೀವ್ ವಾ ಬಣ್ಣನೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿರುವಂತೆಯೇ ಆಸಿಸ್ ತಂಡದ ಮಾಜಿ ನಾಯಕ ಭಾರತೀಯ ಸ್ಪಿನ್ನರ್ ಆರ್ ಅಶ್ವಿನ್ ರನ್ನು ಹೊಗಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿರುವಂತೆಯೇ ಆಸಿಸ್ ತಂಡದ ಮಾಜಿ ನಾಯಕ ಭಾರತೀಯ ಸ್ಪಿನ್ನರ್ ಆರ್ ಅಶ್ವಿನ್ ರನ್ನು ಹೊಗಳಿದ್ದಾರೆ.

ಭಾರತದ ಆರ್ ಅಶ್ವಿನ್ ಬೌಲಿಂಗ್ ವಿಭಾಗದ ಡಾನ್ ಬ್ರಾಡ್ಮನ್ ಎಂದು ಸ್ಟೀವ್ ವಾ ಕರೆದಿದ್ದು, ಅವರ ಬೌಲಿಂಗ್ ನ ಅಂಕಿ ಅಂಶಗಳು ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ. ಕಡಿಮೆ ಅವಧಿಯಲ್ಲಿ ಅಶ್ವಿನ್ ಅವರ ಸಾಧನೆ ನಿಜಕ್ಕೂ  ಪ್ರಶಂಸಾರ್ಹ. ಈಗಾಗಲೇ 250 ವಿಕೆಟ್ ಗಳನ್ನು ಕಬಳಿಸಿರುವ ಅಶ್ವಿನ್ ಖಂಡಿತಾ ಬೌಲಿಂಗ್ ನ ಎಲ್ಲ ದಾಖಲೆಗಳನ್ನು ಮುರಿದು ಅಧ್ವಿತೀಯ ಸಾಧನೆ ಮಾಡಲಿದ್ದಾರೆ ಎಂದು ವಾ ಹೇಳಿದ್ದಾರೆ.

ಇದೇ ವೇಳೆ ತಮ್ಮ ಆಸ್ಟ್ರೇಲಿಯಾ ಆಟಗಾರರಿಗೆ ಕಿವಿಮಾತು ಹೇಳಿರುವ ಸ್ಟೀವ್ ವಾ, ಅಶ್ವಿನ್ ಅವರ ಬೌಲಿಂಗ್ ಪರಿಯನ್ನು ಆಸಿಸ್ ಆಟಗಾರರು ತಿಳಿಯಬೇಕಿದೆ. ಅವರ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿದರೆ ಮಾತ್ರ  ಸರಣಿಗೆಲ್ಲಲು ನಮಗೆ ಅವಕಾಶ ದೊರೆಯುತ್ತದೆ ಎಂದು ಹೇಳಿದ್ದಾರೆ.

ಸ್ಟೀವ್ ವಾ ಹೇಳಿಕೆ ನನಗೆ ಸಿಕ್ಕ ದೊಡ್ಡ ಗೌರವ

ಇನ್ನು ಆಸಿಸ್ ತಂಡದ ನಾಯ ಸ್ಟೀವ್ ವಾ ಅವರ ಬಣ್ಣನೆ ತಮಗೆ ಸಿಕ್ಕ ದೊಡ್ಡ ಗೌರವ ಎಂದು ಆರ್.ಅಶ್ವಿನ್ ಹೇಳಿದ್ದಾರೆ. ತಮ್ಮನ್ನು ಬೌಲಿಂಗ್ ವಿಭಾಗದ ಬ್ರಾಡ್ಮನ್ ಎಂದು ಸ್ಟೀವ್ ವಾ ಹೇಳಿರುವದರಿಂದ ತಮಗೆ ಖುಷಿಯಾಗಿದೆ.  ನಾನು ಪ್ರೀತಿಸುವ ಲೆಜೆಂಡರಿ ನಾಯರಲ್ಲಿ ಸ್ಟೀವ್ ವಾ ಕೂಡ ಒಬ್ಬರು. ಅಂತಹವರು ನನ್ನ ಬಗ್ಗೆ ಮಾತನಾಡಿರುವುದನ್ನು ನಾನು ಗೌರವ ಎಂದು ಭಾವಿಸುತ್ತೇನೆ ಮತ್ತು ನನ್ನ ಬೌಲಿಂಗ್ ಅನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು  ಯತ್ನಿಸುತ್ತೇನೆ ಎಂದು ಅಶ್ವಿನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com