ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಗಿದಿದ್ದು ಪ್ರಸ್ತುತ ಐಪಿಎಲ್ ನಲ್ಲಿ ದೊಡ್ಡ ಸ್ಟಾರ್ ಆಟಗಾರರು ಬಿಕರಿಯಾಗದೆ ಇರುವುದು ವಿಪರ್ಯಾಸ.
ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮಾ, ಇರ್ಫಾನ್ ಪಠಾಣ್, ಚೇತೇಶ್ವರ ಪೂಜಾರ, ನ್ಯೂಜಿಲೆಂಡ್ ನ ರಾಸ್ ಟೇಲರ್ ಮತ್ತು ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ರನ್ನು ಯಾವುದೇ ಫ್ರಾಂಚೈಸಿಗಳು ಖರೀದಿಸಿಲ್ಲ.
ಇಂದು ಬೆಂಗಳೂರಿನ ರಿಟ್ಜ್-ಕಾರ್ಲ್ ಟನ್ ಹೊಟೇಲ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 8 ಫ್ರಾಂಚೈಸಿಗಳು ಪಾಲ್ಗೊಂಡಿದ್ದು, 91.15 ಕೋಟಿ ಬಿಡ್ ಮಾಡಿ 66 ಆಟಗಾರರನ್ನು ಖರೀದಿಸಿದೆ. ಇದರಲ್ಲಿ 2 ಕೋಟಿ ರೂ. ಮೂಲ ದರಕ್ಕೆ ತಮ್ಮನ್ನು ಹರಾಜಿಗೆ ಒಡ್ಡಿಕೊಂಡಿದ್ದ ಬೆನ್ ಸ್ಟೋಕ್ 14.5 ಕೋಟಿ ರುಪಾಯಿಗೆ ರೈಸಿಂಗ್ ಪುಣೆ ತಂಡ ಖರೀದಿಸಿದ್ದು ಇದು ಈ ಸಾಲಿನ ಅತೀ ದೊಡ್ಡ ಮೊತ್ತದ ಹರಾಜಾಗಿದೆ.
ಇದೇ ವೇಳೆ ಏಜೆಂಲಾ ಮ್ಯಾಥ್ಯೂಸ್, ಕ್ರಿಸ್ ವೋಕ್ಸ್, ಇಯಾನ್ ಮಾರ್ಗನ್, ಮಿಚೆಲ್ ಜಾನ್ಸನ್ ಮತ್ತು ಪ್ಯಾಟ್ ಕ್ಯುಮಿನ್ಸ್ ಅತ್ಯಂತ ದುಬಾರಿ ಆಟಗಾರರೆಂದು ಹರಾಜಿನಲ್ಲಿ ಪರಿಗಣಿತರಾಗಿದ್ದಾರೆ.