ಮುಂಬೈ: ಎರಡನೇ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಇಲವೆನ್ ತಂಡದ ವಿರುದ್ಧ ಭಾರತ ಎ ತಂಡ ಭರ್ಜರಿ ಜಯ ಗಳಿಸಿದೆ.
ಮುಂಬೈನ ಬ್ರಾಬೌರ್ನ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡ 62 ಎಸೆತಗಳು ಇರುವಂತೆ ಗುರಿ ಮುಟ್ಟಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಇಲೆವನ್ ತಂಡ 282 ರನ್ ಗಳಿಗೆ ಆಲೌಟ್ ಆಗಿದ್ದು ಟೀಂ ಇಂಡಿಯಾ ಗೆಲ್ಲಲು 283 ರನ್ ಗುರಿ ನೀಡಿತ್ತು. ಈ ಮೊತ್ತ ಬೆನ್ನಟ್ಟಿ ಭಾರತ ಎ ತಂಡದ ಪರ ನಾಯಕ ಅಜಿಂಕ್ಯ ರಹಾನೆ ಮತ್ತು ರಿಷಬ್ ಪಂತ್ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ 4 ವಿಕೆಟ್ ನಷ್ಟಕ್ಕೆ 283 ರನ್ ಸಿಡಿಸಿತು.
ಭಾರತ ಎ ತಂಡದ ಪರ ಅಜಿಂಕ್ಯ ರಹಾನೆ 91, ಜಾಕ್ಸನ್ 59, ರಿಷಬ್ ಪಂತ್ 59, ಸುರೇಶ್ ರೈನಾ 45 ಮತ್ತು ದಿಂಡ ಅಜೇಯ 23 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ಇಲವೆನ್ ಪರ ರಾಯ್ 25, ಹಾಲೇಸ್ 51, ಬೈರ್ಸ್ಟೋ 64, ಸ್ಟೋಕ್ಸ್ 38, ರಶೀದ್ 39 ಮತ್ತು ವಿಲ್ಲೇಯ್ 38 ರನ್ ಸಿಡಿಸಿದ್ದಾರೆ.
ಟೀಂ ಇಂಡಿಯಾ ಪರ್ವೇಜ್ ರಸೂಲ್ 3, ನದೀಮ್, ದಿಂಡ, ಸಂಗ್ವಾನ್ ತಲಾ 2 ವಿಕೆಟ್ ಪಡೆದಿದ್ದಾರೆ.