ವಿರಾಟ್ ಕೊಹ್ಲಿ ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್: ಪಾಕ್ ವೇಗಿ ಅಮಿರ್

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮಿರ್ ಹೇಳಿದ್ದಾರೆ...
ವಿರಾಟ್ ಕೊಹ್ಲಿ-ಮೊಹಮ್ಮದ್ ಅಮಿರ್
ವಿರಾಟ್ ಕೊಹ್ಲಿ-ಮೊಹಮ್ಮದ್ ಅಮಿರ್
Updated on
ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮಿರ್ ಹೇಳಿದ್ದಾರೆ. 
ಅಭಿಮಾನಿಗಳೊಂದಿಗೆ ಟ್ವೀಟ್ ಚ್ಯಾಟ್ ಮಾಡಿದ್ದ ಮೊಹಮ್ಮದ್ ಅಮಿರ್, ಅಲ್ಲಿ ಅಭಿಮಾನಿಯೊಬ್ಬ ಜಗತ್ತಿನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಯಾರು ಎಂದು ಕೇಳಿದ್ದಕ್ಕೆ ಮೊಹಮ್ಮದ್ ಅಮಿರ್, ವಿರಾಟ್ ಕೊಹ್ಲಿ ಎಂದು ಟ್ವೀಟ್ ಮಾಡಿದ್ದಾರೆ. 
ನಂತರ ರೀಟ್ವೀಟ್ ಮಾಡಿದ ಅಮಿರ್ ಜೋ ರೂಟ್, ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಸಹ ಶ್ರೇಷ್ಠ ಆಟಗಾರರೇ ಆದರೆ ನನಗೆ ವೈಯಕ್ತಿಕವಾಗಿ ವಿರಾಟ್ ಕೊಹ್ಲಿ ಮೆಚ್ಚು ಎಂದು ಟ್ವೀಟ್ ಮಾಡಿದ್ದಾರೆ. 
ಕಳೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿತ್ತು. ಈ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಅಮಿರ್ ಟೀಂ ಇಂಡಿಯಾ ಆರಂಭಿಕ ಆಟಗಾರರ ವಿಕೆಟ್ ಪಡೆಯುವ ಮೂಲಕ ಪಾಕ್ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 
ಇನ್ನು 2009ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಪಡೆದಿದ್ದನ್ನು ಇಲ್ಲಿ ಸ್ಮರಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com