ಕ್ರಿಕೆಟಿಗ ಉಮೇಶ್ ಯಾದವ್ ಮನೆ ಮೇಲೆ ಕಳ್ಳರ ದಾಳಿ, ಹಣ, ದುಬಾರಿ ಮೊಬೈಲ್ ಗಳ ಕಳವು

ಖ್ಯಾತ ಕ್ರಿಕೆಟಿಗ ಉಮೇಶ್ ಯಾದವ್ ಅವರ ಮನೆ ಮೇಲೆ ಕಳ್ಳರು ದಾಳಿ ನಡೆಸಿದ್ದು, ಮನೆಯಲ್ಲಿ ನಗದು ಮತ್ತು 2 ದುಬಾರಿ ಮೊಬೈಲ್ ಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನಾಗ್ಪುರ: ಖ್ಯಾತ ಕ್ರಿಕೆಟಿಗ ಉಮೇಶ್ ಯಾದವ್ ಅವರ ಮನೆ ಮೇಲೆ ಕಳ್ಳರು ದಾಳಿ ನಡೆಸಿದ್ದು, ಮನೆಯಲ್ಲಿ ನಗದು ಮತ್ತು 2 ದುಬಾರಿ ಮೊಬೈಲ್ ಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಉಮೇಶ್ ಯಾದವ್ ಅವ​ರ ನಾಗ್ಪುರದಲ್ಲಿರುವ ಮನೆಗೆ ನುಗ್ಗಿದ್ದ ಕಳ್ಳರು 45 ಸಾವಿರ ರು. ನಗದು ಮತ್ತು 2 ಮೊಬೈಲ್​ ಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಸೋಮವಾರ ರಾತ್ರಿ ಸುಮಾರ 7ರಿಂದ 9ರ  ನಡುವೆ ಉಮೇಶ್ ಕುಟುಂಬ ಮನೆಯಲ್ಲಿಲ್ಲದ ವೇಳೆ ಕಳ್ಳತನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗ್ಪುರದ ಲಕ್ಷ್ಮೀನಗರ ಪ್ರದೇಶದಲ್ಲಿನ ಕಟ್ಟಡದ 9ನೇ ಮಹಡಿಯಲ್ಲಿ ಉಮೇಶ್ ಯಾದವ್ ಅವರ ಫ್ಲ್ಯಾಟ್ ನ ಕಿಟಕಿಯೊಂದನ್ನು ಮುರಿದು ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದು, ಕಟ್ಟಡದ 8ನೇ ಮಹಡಿಯಲ್ಲಿ ರಿಪೇರಿ ಕೆಲಸ  ಮಾಡುತ್ತಿದ್ದ ಇಬ್ಬರು ಕಾರ್ವಿುಕರ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಓರ್ವ ಶಂಕಿತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com