ಲಂಡನ್: ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಚಿತ್ರೀಕರಣ ಮುಗಿದಿದ್ದರು ನಟ ಕಿಚ್ಚಾ ಸುದೀಪ್ ಲಂಡನ್ ನಲ್ಲೇ ಬಿಡು ಬಿಟ್ಟಿದ್ದು ನಾಳೆ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಹುರಿದುಂಬಿಸಲಿದ್ದಾರೆ.
ಭಾನುವಾರ ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಲಿದ್ದು ತಾವು ಈ ಪಂದ್ಯ ವೀಕ್ಷಣೆಯನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Wrappd a gud schedule. All excited to witness th Indian women's world cup cricket finals at Lords on Sunday.Can't miss this proud moment.
ಟೀಂ ಇಂಡಿಯಾದ ಸ್ಮರಣೀಯ ಹಾಗೂ ರೋಚಕ ಪಂದ್ಯವನ್ನು ಮಿಸ್ ಮಾಡಿಕೊಳ್ಳದೆ ತಾನು ಪಂದ್ಯಕ್ಕೆ ಸಾಕ್ಷಿಯಾಗುವಂಥ ಸುವರ್ಣಾವಕಾಶವನ್ನು ನಾನು ತಪ್ಪಿಸಿಕೊಳ್ಳಲಾರೆ ಎಂದು ಸುದೀಪ್ ಟ್ವೀಟಿಸಿದ್ದಾರೆ.