ಭಾರತೀಯ ಮಹಿಳಾ ಕ್ರಿಕೆಟ್ ಹೊಸ ದಿಶೆಯಲ್ಲಿ ಹೆಜ್ಜೆ ಹಾಕಲು ಗೆಲುವು ಅನಿವಾರ್ಯ!

ಇಂಗ್ಲೆಂಡ್ ಪಾಲಿಗೆ ಈ ಬಾರಿ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಎಷ್ಟರ ಮಟ್ಟಿಗೆ ಪ್ರಮುಖವಾಗಿದೆಯೋ ತಿಳಿದಿಲ್ಲ. ಆದರೆ ಭಾರತ ತಂಡದ ಮಟ್ಟಿಗೆ ಮಾತ್ರ ಈ ವಿಶ್ವಕಪ್ ಗೆಲುವು ತೀರಾ ಪ್ರಾಮುಖ್ಯತೆ ಪಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಇಂಗ್ಲೆಂಡ್ ಪಾಲಿಗೆ ಈ ಬಾರಿ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಎಷ್ಟರ ಮಟ್ಟಿಗೆ ಪ್ರಮುಖವಾಗಿದೆಯೋ ತಿಳಿದಿಲ್ಲ. ಆದರೆ ಭಾರತ ತಂಡದ ಮಟ್ಟಿಗೆ ಮಾತ್ರ ಈ ವಿಶ್ವಕಪ್ ಗೆಲುವು ತೀರಾ ಪ್ರಾಮುಖ್ಯತೆ ಪಡೆದಿದೆ.

ಭಾರತದಲ್ಲಿ ಮಹಿಳಾ ಕ್ರಿಕೆಟ್ ರಂಗದ ಅಭಿವೃದ್ಧಿಗೆ ಈ ಬಾರಿಯ ವಿಶ್ವಕಪ್ ಗೆಲುವ ಪ್ರಮುಖವಾಗಿದ್ದು, ಭಾರತೀಯ ಮಹಿಳಾ ಕ್ರಿಕೆಟ್ ಹೊಸ ದಿಶೆಯತ್ತ ಹೆಜ್ಜೆ ಹಾಕುವಲ್ಲಿ ಇಂದಿನ ಗೆಲುವು ತೀರಾ ಅನಿವಾರ್ಯವಾಗಿದೆ. ಭಾರತದಲ್ಲಿ  ಅಷ್ಟೇನೂ ಪ್ರಚಾರದಲ್ಲಿಲ್ಲದ ಮಹಿಳಾ ಕ್ರಿಕೆಟ್ ಅನ್ನು ಪುರುಷರ ಕ್ರಿಕೆಟ್ ಗೆ ಸರಿಸಮಾನವಾಗಿ ಪ್ರಚಾರ ಮಾಡಲು ಇಂದು ಭಾರತ ತಂಡ ಶತಾಯಗತಾಯ ಗೆಲುವು ಸಾಧಿಸಿ ತನ್ನ ಚೊಚ್ಚಲ ವಿಶ್ವಕಪ್ ಗೆ ಮುತ್ತಿಡಬೇಕಿದೆ.

ಈ ವಿಶ್ವಕಪ್ ಗೆದ್ದರೆ ಭಾರತದಲ್ಲಿ ಮಹಿಳಾ ಕ್ರಿಕೆಟ್ ಹೊಸ ದಿಶೆಯಲ್ಲಿ ಹೆಜ್ಜೆ ಹಾಕಲು ನೆರವಾಗಲಿದೆ ಎಂಬುದು ಕ್ರಿಕೆಟ್ ತಜ್ಞರ ಲೆಕ್ಕಾಚಾರ. ಭಾರತ ಪುರುಷರ ತಂಡ ಇದೇ ಅಂಗಳದಲ್ಲಿ 1983ರಲ್ಲಿ ಮೊತ್ತಮೊದಲ ಬಾರಿ ವಿಶ್ವಕಪ್ ಎತ್ತಿ ಹಿಡಿದಿತ್ತು.

ಮೂವತ್ತನಾಲ್ಕು ವರ್ಷಗಳ ಹಿಂದೆ ‘ಕಪಿಲ್ ಡೆವಿಲ್ಸ್’ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ನಿಂತು ಪ್ರುಡೆನ್ಶಿಯಲ್ ವಿಶ್ವಕಪ್ ಎತ್ತಿಹಿಡಿದ ಐತಿಹಾಸಿಕ ದಿನ, ಭಾರತೀಯ ಕ್ರಿಕೆಟ್​ನ ಚಹರೆಯನ್ನೇ ಬದಲಾಯಿಸಿತ್ತು.

ಈಗ ಅಂಥದ್ದೇ ಮತ್ತೊಂದು ಐತಿಹಾಸಿಕ ಕ್ಷಣದ ನಿರೀಕ್ಷೆಯಲ್ಲಿ ಭಾರತೀಯ ಅಭಿಮಾನಿಗಳಿದ್ದಾರೆ. ಯಾಕೆಂದರೆ, ಈ ಬಾರಿಯ ಗೆಲುವು ಕೂಡ ದೇಶದ ಮಹಿಳಾ ಕ್ರಿಕೆಟ್​ನ ರೂಪುರೇಷೆಯನ್ನೇ ಬದಲಾಯಿಸುವುದು ನಿಶ್ಚಿತವೆನಿಸಿದೆ. ಅಂಥದ್ದೊಂದು ಮಹಾನ್ ನಿರೀಕ್ಷೆ ಹೊತ್ತು ನಡೆಯಲಿರುವ ಪಂದ್ಯ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್.

ಏಳು ಬಾರಿ ವಿಶ್ವಕಪ್ ಫೈನಲ್ ಆಡಿರುವ ಆತಿಥೇಯ ಇಂಗ್ಲೆಂಡ್ ಹಾಗೂ 2ನೇ ಬಾರಿಗೆ ಫೈನಲ್​ಗೆ ಲಗ್ಗೆ ಇಟ್ಟಿರುವ ಭಾರತ ತಂಡಗಳು ಭಾನುವಾರ ಪ್ರತಿಷ್ಠಿತ ಮೈದಾನದಲ್ಲಿ ಪ್ರಶಸ್ತಿಗಾಗಿ ಹೋರಾಡಲಿವೆ.

ಭಾರತ ಮಹಿಳಾ ತಂಡ ಎರಡನೇ  ಬಾರಿ ವಿಶ್ವಕಪ್ ಕ್ರಿಕೆಟ್‌ನ ಫೈನಲ್‌ ಪ್ರವೇಶಿಸಿದೆ. 2005 ರಲ್ಲಿ ಅಂತಿಮ ಹಣಾಹಣಿಯಲ್ಲಿ ಈ ತಂಡ ಆಸ್ಟ್ರೇಲಿಯಾ ವಿರುದ್ಧ 98 ರನ್‌ ಗಳಿಂದ ಸೋತಿತ್ತು. ಆಗ ತಂಡದಲ್ಲಿದ್ದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಈ  ಬಾರಿಯೂ ಆಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com