ಐಸಿಸಿ ಕನಸಿನ ವಿಶ್ವಕಪ್ ತಂಡಕ್ಕೆ ಮಿಥಾಲಿ ರಾಜ್ ನಾಯಕಿ!

ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಫೈನಲ್ ವರೆಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದ ನಾಯಕಿ ಮಿಥಾಲಿ ರಾಜ್ ಗೆ ಐಸಿಸಿ ಅಪೂರ್ವ ಗೌರವ ನೀಡಿದ್ದು, ತನ್ನ ಕನಸಿನ ವಿಶ್ವಕಪ್ ತಂಡಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದೆ..
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್

ನವದೆಹಲಿ: ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಫೈನಲ್ ವರೆಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದ ನಾಯಕಿ ಮಿಥಾಲಿ ರಾಜ್ ಗೆ ಐಸಿಸಿ ಅಪೂರ್ವ ಗೌರವ ನೀಡಿದ್ದು, ತನ್ನ ಕನಸಿನ ವಿಶ್ವಕಪ್  ತಂಡಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದೆ.

34 ವರ್ಷ ವಯಸ್ಸಿನ ಹೈದರಾಬಾದ್ ಮೂಲದ ಆಟಗಾರ್ತಿ ಮಿಥಾಲಿ ರಾಜ್ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 409 ರನ್ ಗಳಿಸಿದ್ದರು. ಅಲ್ಲದೆ ಭಾರತ ತಂಡವನ್ನು ಯಶಸ್ವಿಯಾಗಿ ಫೈನಲ್ ವರೆಗೂ ತಂದಿದ್ದರು. ಫೈನಲ್ ನಲ್ಲಿ  ಕೇವಲ 9 ರನ್ ಗಳ ಅಂತರದಲ್ಲಿ ಮಿಥಾಲಿ ರಾಜ್ ಪಡೆ ಸೋತಿತ್ತಾದರೂ, ಮಿಥಾಲಿ ಸಾಧನೆಯನ್ನು ಶ್ಲಾಘಿಸಿರುವ ಐಸಿಸಿ ತನ್ನ ವಿಶ್ವಕಪ್ ತಂಡಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದೆ.

ಕೇವಲ ಮಿಥಾಲಿ ರಾಜ್ ಅವರು ಮಾತ್ರವಲ್ಲ..ಐಸಿಸಿಯ ಕನಸಿನ ವಿಶ್ವಕಪ್ ತಂಡದಲ್ಲಿ ಸೆಮಿಫೈನಲ್ ಹಿರೋಯಿನ್ ಪಂಜಾಬ್ ಮೂಲದ ಹರ್ಮನ್ ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ ಕೂಡ ಸ್ಥಾನ ಪಡೆದಿದ್ದಾರೆ. ಉಳಿದಂತೆ  ವಿಶ್ವಕಪ್ ಟೂರ್ನಿಯ ಟಾಪ್ ಸ್ಕೋರರ್ ಇಂಗ್ಲೆಂಡ್ ತಂಡದ ಟಮ್ಸಿನ್ ಬ್ಯುಮಾಂಟ್ (410 ರನ್) ತಂಡದಲ್ಲಿ ಸ್ಥಾನ ಪಡೆದಿದ್ದು, ವಿಶ್ವಕಪ್ ಪ್ರಶಸ್ತಿ ಗೆದ್ದ ಇಂಗ್ಲೆಂಡ್ ತಂಡದ ಒಟ್ಟು ಐದು ಆಟಗಾರ್ತಿಯರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಐಸಿಸಿ ಕನಸಿನ ತಂಡವನ್ನು ಐಸಿಸಿಯ ಐದು ಉನ್ನತ ಸದಸ್ಯರ ಸಮಿತಿ ಆಯ್ಕೆ ಮಾಡಿದ್ದು, ಐಸಿಸಿ ಜನರಲ್ ಮ್ಯಾನೇಜರ್ ಜಿಯಾಫ್ ಅಲ್ಲಾರ್ಡೈಸ್, ಮಾಜಿ ವೆಸ್ಟ್ ಇಂಡೀಸ್ ಆಟಗಾರ ಇಯಾನ್ ಬಿಷಪ್, ಇಂಗ್ಲೆಂಡ್ ತಂಡದ  ಮಾಜಿ ನಾಯಕಿ ಶಾರ್ಲೆಟ್ ಎಡ್ವರ್ಡ್ಸ್, ಭಾರತ ತಂಡದ ಮಾಜಿ ಆಟಗಾರ್ತಿ ಹಾಗೂ ಬರಹಗಾರ್ತಿ ಸ್ನೇಹಾಲ್ ಪ್ರಧಾನ್ ಹಾಗೂ ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಲಿಸಾ ಸ್ಥಾಲೇಕರ್ ಅವರು ಸಮಿತಿ ಸದಸ್ಯರಾಗಿದ್ದರು.

ಐಸಿಸಿಯ ಕನಸಿನ ವಿಶ್ವಕಪ್ ತಂಡ ಇಂತಿದೆ..
1. ಟಮ್ಸಿನ್ ಬ್ಯುಮಾಂಟ್ (ಇಂಗ್ಲೆಂಡ್) 410 ರನ್ ಗಳು
2. ಲಾರಾ ವಾಲ್ವಾರ್ಡ್ಟ್  (ದಕ್ಷಿಣ ಆಫ್ರಿಕಾ) 324 ರನ್ ಗಳು
3. ಮಿಥಾಲಿ ರಾಜ್ (ಭಾರತ) (ತಂಡದ ನಾಯಕಿ) 409 ರನ್ ಗಳು
4. ಎಲ್ಲಿಸೆ ಪೆರ್ರಿ (ಆಸ್ಟ್ರೇಲಿಯಾ) 404 ರನ್ ಗಳು ಹಾಗೂ 9 ವಿಕೆಟ್ ಗಳು
5. ಸಾರಾ ಟೇಲರ್ (ಇಂಗ್ಲೆಂಡ್) (ವಿಕೆಟ್ ಕೀಪರ್) 396 ರನ್, 4 ಕ್ಯಾಚ್, 2 ಸ್ಟಂಪಿಗ್ಸ್
6. ಹರ್ಮನ್ ಪ್ರೀತ್ ಕೌರ್ (ಭಾರತ) 359 ರನ್, 5 ವಿಕೆಟ್
7. ದೀಪ್ತಿ ಶರ್ಮಾ (ಭಾರತ) 2016 ರನ್, 12 ವಿಕೆಟ್ ಗಳು
8. ಮರಿಜೇನ್ ಕಾಪ್ಪ್ (ದಕ್ಷಿಣ ಆಫ್ರಿಕಾ) 13 ವಿಕೆಟ್ ಗಳು
9. ಡೇನ್ ವ್ಯಾನ್ ನೀಕರ್ಕ್ (ದಕ್ಷಿಣ ಆಫ್ರಿಕಾ) 99 ರನ್ ಗಳು ಮತ್ತು 15 ವಿಕೆಟ್ ಗಳು
10. ಆನ್ಯಾ ಶ್ರುಬ್ಸೋಲ್ (ಇಂಗ್ಲೆಂಡ್) 12 ವಿಕೆಟ್ ಗಳು
11. ಆಲೆಕ್ಸ್ ಹಾರ್ಟ್ಲಿ (ಇಂಗ್ಲೆಂಡ್) 10 ವಿಕೆಟ್ ಗಳು
12. ನಟಾಲಿ ಶೀವರ್ (ಇಂಗ್ಲೆಂಡ್) 369 ರನ್ ಗಳು ಮತ್ತು 7 ವಿಕೆಟ್ ಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com