ಯುವರಾಜ್ ಸಿಂಗ್ ಎದುರು ನಾನು ಕ್ಲಬ್ ಬ್ಯಾಟರ್ ನಂತೆ ಎನಿಸಿತ್ತು: ವಿರಾಟ್ ಕೊಹ್ಲಿ

ಯುವಿ ಆಟವನ್ನು ಕಂಡು ನಾನು ಅವರ ಎದುರು ಕ್ಲಬ್ ಬ್ಯಾಟ್ಸ್ ಮನ್ ನಂತೆ ಎಂದೆನಿಸಿಬಿಟ್ಟಿತು ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 
ಬರ್ಮಿಂಗ್ ಹ್ಯಾಮ್: ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಬ್ಬರಿಸಿದ್ದ ಯುವರಾಜ್ ಸಿಂಗ್ ಅವರ ಆಟದ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಪ್ರತಿಕ್ರಿಯಿಸಿದ್ದು, ಯುವರಾಜ್ ಸಿಂಗ್ ಆಭಟವನ್ನು ಕಂಡು, ಯುವಿ ಎದುರು ನಾನು ಕ್ಲಬ್ ಬ್ಯಾಟರ್ ನಂತೆ ಎನಿಸಿತ್ತು ಎಂದು ಹೇಳಿದ್ದಾರೆ. 
ಜೂ.4 ರಂದು ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ 124 ರನ್ ಗಳ ಭರ್ಜರಿ ಜಯ ಗಳಿಸಿದೆ. 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಯುವರಾಜ್ ಸಿಂಗ್  ಆಟ ಹಾಗೂ ವಿರಾಟ್ ಕೊಹ್ಲಿಯ 81 ರನ್ ಗಳ ನೆರವಿನಿಂದ ಭಾರತ 319 ರನ್ ಗಳನ್ನು ಕಲೆಹಾಕಲು ಸಾಧ್ಯವಾಯಿತು. 
ಪಾಕಿಸ್ತಾನದ ವಿರುದ್ಧ ಅಕ್ಷರಶಃ ಸ್ಫೋಟಕ ಆಟವಾಡಿದ ಯುವಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಯುವರಾಜ್ ಸಿಂಗ್ ಅವರ ಸ್ಫೋಟಕ ಆಟದ ಬಗ್ಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು, ನಾನು ರನ್ ಗಳಿಸಲು ಪರದಾಡುತ್ತಿರುವಾಗ ಯುವರಾಜ್ ಸಿಂಗ್ ಒತ್ತಡವನ್ನು ತಮ್ಮ ಮೇಲೆ ತೆಗೆದುಕೊಂಡರು, ಯುವಿ ಆಟವನ್ನು ಕಂಡು ನಾನು ಅವರ ಎದುರು ಕ್ಲಬ್ ಬ್ಯಾಟ್ಸ್ ಮನ್ ನಂತೆ ಎಂದೆನಿಸಿಬಿಟ್ಟಿತು ಎಂದು ಕೊಹ್ಲಿ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ. ನಾವು ಪಂದ್ಯವನ್ನು ಗೆದ್ದಿರಬಹುದು ಆದರೆ ಫೀಲ್ಡಿಂಗ್ ನಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ ಎಂದು ಕೊಹ್ಲಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com