

ಇಸ್ಲಾಮಾಬಾದ್: ಬಹುಶಃ ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವದ ಯಾವುದೇ ರಾಷ್ಟ್ರದ ವಿರುದ್ಧ ಸೋತರೂ ಪಾಕಿಸ್ತಾನೀಯರು ಅಷ್ಟು ತಲೆಕೆಡಿಸಿಕೊಳ್ಳುವುದಿಲ್ಲ.. ಆದರೆ ಭಾರತದ ವಿರುದ್ಧ ಸೋತರೆ ಮಾತ್ರ ಅವರ ಪಿತ್ತ ನೆತ್ತಿಗೇರುತ್ತದೆ.
ಸಾಕಷ್ಟು ಬಾರಿ ಇದು ಸಾಬೀತಾಗಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆದು ಭಾರತ ಗೆದ್ದಾಗಲೆಲ್ಲಾ ಆ ದೇಶದ ಕ್ರೀಡಾ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ. ಕ್ರಿಕೆಟಿಗರ ಚಿತ್ರ ದಹನ, ಟಿವಿ ಸೆಟ್ ಗಳನ್ನು ಒಡೆದುಹಾಕುವುದು, ಪ್ರತಿಭಟನೆ ನಡೆಸುವುದು ಪಾಕಿಸ್ತಾನದಲ್ಲಿ ಮಾಮೂಲಿ ಎಂಬತಾಗಿದೆ. ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಿಮಿತ್ತ ನಡೆದ ಭಾರತ-ಪಾಕ್ ಪಂದ್ಯದಲ್ಲೂ ಇದೇ ಆಗಿದ್ದು, ಭಾರತ ಆ ಪಂದ್ಯವನ್ನು 124 ರನ್ ಗಳ ಭಾರಿ ಅಂತರದಿಂದ ಜಯಿಸಿತ್ತು.
ಭಾರತದ ಈ ಗೆಲುವು ಪಾಕ್ ಆಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಪಾಕಿಸ್ತಾನದ ಓರ್ವ ಪತ್ರಕರ್ತೆ ತಮ್ಮದೇ ಆಟಗಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕ್ ಕ್ರಿಕೆಟಿಗರ ಕುರಿತು ಅವರು ಮಾಡಿರುವ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಅಂತೆಯೇ ಅವರ ಟ್ವೀಟ್ ಪಾಕಿಸ್ತಾನ ಕ್ರಿಕೆಟ್ ತಂಡದ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.
ಕಳೆದ ಜೂನ್ 4ರಂದು ನಜ್ರಾನಾ ಘಫರ್ ಎಂಬಾಕೆ, "ಭಾರತದ ಗೆಲುವ ಸಾಧಿಸುವುದಿರಲಿ..ಕೊನೇ ಪಕ್ಷ ಗೆಲ್ಲುವುದಕ್ಕಾಗಿ ನೀವು ಆಡುತ್ತಿದ್ದೀರಿ ಎಂಬುದನ್ನು ಮರೆಯಬೇಡಿ..ಈ ಹಿಂದೆಂದಿಗಿಂತಲೂ ಅತ್ಯಂತ ಕಳಪೆ ಪ್ರದರ್ಶನ...ಪಾಕಿಸ್ತಾನದ ಎಲ್ಲ ಆಟಗಾರರನ್ನು ಭಾರತದವರು ತೆಗೆದುಕೊಳ್ಳಲಿ...ಆದರೆ ಕೇವಲ ಒಂದು ವರ್ಷದ ಮಟ್ಟಿಗೆ ನಮಗೆ ವಿರಾಟ್ ಕೊಹ್ಲಿ ಅವರನ್ನು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ. ನಜ್ರಾನಾ ಘಫರ್ ಅವರ ಈ ಟ್ವೀಟ್ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಘಫರ್ ಅವರ ಟ್ವೀಟ್ ಗೆ ಭಾರತೀಯ ಕ್ರೀಡಾಭಿಮಾನಿಗಳು ಕೂಡ ತಿರುಗೇಟು ನೀಡಿದ್ದು, ಭಾರಿ ಪ್ರಮಾಣದಲ್ಲಿ ನಜ್ರಾನಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಕೊಹ್ಲಿ ಹೆಸರಿನ ಮೊದಲ ಅಕ್ಷರ ಕೆ..ಕಾಶ್ಮೀರದ ಮೊದಲ ಕೆ... ಕಾಶ್ಮೀರ ಮತ್ತು ಕೊಹ್ಲಿ ಎರಡನ್ನೂ ಪಾಕಿಸ್ತಾನ ಪಡೆಯಲು ಸಾಧ್ಯವೇ ಇಲ್ಲ.. ನೀವೆಷ್ಟೇ ತಿಣುಕಾಡಿದರೂ "ಕೆ" ನಮ್ಮದೇ ಎಂದು ತಿರುಗೇಟು ನೀಡಿದ್ದಾರೆ.
ಪತ್ರಕರ್ತೆ ನಜ್ರಾನಾ ಘಫರ್ ಅವರ ಟ್ವೀಟ್ ಹಾಗೂ ಅವರ ಟ್ವೀಟ್ ಗೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ....
you only deserve to have "KRK"...