ಬದ್ಧ ವೈರಿ ಇಂಗ್ಲೆಂಡ್ ಜೆರ್ಸಿ ತೊಡಲು ಆಸಿಸ್ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿರ್ಧರಿಸಿದ್ದೇಕೆ?

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ ಹಲವು ಅಚ್ಚರಿ ಘಟನೆಗಳಿಗೆ ಸಾಕ್ಷಿಯಾಗಿದ್ದು, ಇದೀಗ ಆಸ್ಚ್ರೇಲಿಯಾ ಮಾಜಿ ಸ್ಪಿನ್ ದಿಗ್ಗಜ ಶೇನ್ ವಾರ್ನ್ ತಮ್ಮ ಬದ್ಧ ವೈರಿ ಇಂಗ್ಲೆಂಡ್ ತಂಡದ ಜೆರ್ಸಿ ತೊಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಶೇನ್ ವಾರ್ನ್ ಮತ್ತು ಸೌರವ್ ಗಂಗೂಲಿ
ಶೇನ್ ವಾರ್ನ್ ಮತ್ತು ಸೌರವ್ ಗಂಗೂಲಿ
Updated on: 

ಲಂಡನ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ ಹಲವು ಅಚ್ಚರಿ ಘಟನೆಗಳಿಗೆ ಸಾಕ್ಷಿಯಾಗಿದ್ದು, ಇದೀಗ ಆಸ್ಚ್ರೇಲಿಯಾ ಮಾಜಿ ಸ್ಪಿನ್ ದಿಗ್ಗಜ ಶೇನ್ ವಾರ್ನ್ ತಮ್ಮ ಬದ್ಧ ವೈರಿ ಇಂಗ್ಲೆಂಡ್ ತಂಡದ  ಜೆರ್ಸಿ ತೊಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಹೌದು..ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳಂತೆಯೇ ಕ್ರಿಕೆಟ್ ರಂಗದ ಮತ್ತೊಂದು ಬದ್ಧ ವೈರಿಗಳೆಂದೇ ಖ್ಯಾತಿ ಪಡೆದಿರುವುದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು. ಇದಕ್ಕೆ ಸ್ಪಷ್ಟ ನಿದರ್ಶನ ಎಂದರೆ ಆ್ಯಶಸ್  ಸರಣಿ.. ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ತಮ್ಮ ಬದ್ಧ ವೈರಿ ಇಂಗ್ಲೆಂಡ್ ತಂಡದ ಜೆರ್ಸಿ ತೊಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಶೇನ್ ವಾರ್ನ್ ಅವರ ಈ ಅನಿವಾರ್ಯತೆಗೆ  ಕಾರಣವಾಗಿರುವುದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಂತೆ..

ಈ ವಿಚಾರವನ್ನು ಸ್ವತಃ ಶೇನ್ ವಾರ್ನ್ ತಮ್ಮ ಟ್ವಿಟರ್ ನಲ್ಲಿ ಬಹಿರಂಗ ಪಡಿಸಿದ್ದು, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯದ ನಡುವೆ ಕಮೆಂಟರಿ ಬಾಕ್ಸ್ ನಲ್ಲಿದ್ದ ವಾರ್ನ್ ಮತ್ತು ಸೌರವ್ ಗಂಗೂಲಿ ಬೆಟ್ಟಿಂಗ್  ಕಟ್ಟಿದ್ದರಂತೆ. ಇಂಗ್ಲೆಂಡ್ ತಂಡ ಉತ್ತಮವಾಗಿದೆ ಎಂಬ ಸೌರವ್ ಗಂಗೂಲಿ ಹೇಳಿಕೆಯನ್ನು ವಾರ್ನ್ ಅಲ್ಲಗಳೆದಿದ್ದಾರೆ. ಅಂತೆಯೇ ಇಂಗ್ಲೆಂಡ್ ಗಿಂತ ಆಸ್ಟ್ರೇಲಿಯಾ ತಂಡ ಉತ್ತಮವಾಗಿದೆ ಎಂದು ವಾದ ಮಂಡಿಸಿದ್ದಾರೆ.  ಈ ವೇಳೆ  ವಾದ ಮುಂದುವರೆದಿದ್ದು ಇಬ್ಬರೂ ಲೆಜೆಂಡ್ ಗಳು ಪರಸ್ಪರ ಬೆಟ್ಟಿಂಗ್ ಕಟ್ಟಿದ್ದಾರೆ. ಅದರಂತೆ ಇಂಗ್ಲೆಂಡ್ ಸೋತರೆ ಗಂಗೂಲಿ ವಾರ್ನ್ ಗೆ ಡಿನ್ನರ್ ಪಾರ್ಟಿ ಕೊಡಿಸುವುದಷ್ಟೇ ಅಲ್ಲದೇ ಆಸಿಸ್ ಟೀ ಶರ್ಟ್ ಧರಿಸುವಂತೆ ಮತ್ತು ವಾರ್ನ್  ಸೋತರೆ ಡಿನ್ನರ್ ಪಾರ್ಟಿಯೊಂದಿಗೆ ಇಂಗ್ಲೆಂಡ್ ತಂಡದ ಜೆರ್ಸಿ ತೊಡುವ ಬೆಟ್ಟಿಂಗ್ ಕಟ್ಟಲಾಗಿತ್ತು.

ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿದ್ದು, ವಾರ್ನ್ ತಮ್ಮ ಬೆಟ್ಟಿಂಗ್ ಸೋತಿದ್ದಾರೆ. ಹೀಗಾಗಿ ಶೇನ್ ವಾರ್ನ್ ಒಂದು ದಿನವಿಡೀ ಇಂಗ್ಲೆಂಡ್ ತಂಡದ ಜೆರ್ಸಿ ತೊಟ್ಟ ತಿರುಗಾಡಬೇಕಿದೆ, ಈ ಬಗ್ಗೆ ಟ್ವೀಟ್ ಮಾಡಿರುವ ವಾರ್ನ್, ಬೆಟ್ಟಿಂಗ್  ಸೋತಿದ್ದರಿಂದ ನಾನು ಇಂಗ್ಲೆಂಡ್ ತಂಡದ ಜೆರ್ಸಿ ತೊಡಬೇಕಿದೆ. ಯಾರಾದರೂ ಇಂಗ್ಲೆಂಡ್ ತಂಡದ ಜೆರ್ಸಿ ಕೊಡಿ ಪ್ಲೀಸ್ ಎಂದು ಕೇಳಿಕೊಂಡಿದ್ದಾರೆ.

ವಾರ್ನ್ ಅವರ ಈ ಹಾಸ್ಯಾಸ್ಪದ ಟ್ವೀಟ್ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com