ಕೋಚ್ ಅನಿಲ್ ಕುಂಬ್ಳೆ ಸ್ಥಾನ ತುಂಬುವುದು ಕಷ್ಟ: ಸೆಹ್ವಾಗ್ ಟ್ವೀಟ್

ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅನಿಲ್‌ ಕುಂಬ್ಳೆ ದಿಢೀರ್‌ ಆಗಿ ರಾಜೀನಾಮೆ ಸಲ್ಲಿಸಿದ್ದರಿಂದ ಸಾಕಷ್ಟು ಚರ್ಚೆ...
ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್
Updated on: 
ನವದೆಹಲಿ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅನಿಲ್‌ ಕುಂಬ್ಳೆ ದಿಢೀರ್‌ ಆಗಿ ರಾಜೀನಾಮೆ ಸಲ್ಲಿಸಿದ್ದರಿಂದ ಸಾಕಷ್ಟು ಚರ್ಚೆ ನಡೆಯುತ್ತಿವೆ.
ಈ ನಡುವೆ ಮುಂದಿನ ಕೋಚ್‌ ಹುದ್ದೆಗಾಗಿ ಅರ್ಜಿ ಸಲ್ಲಿಸಿರುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕುಂಬ್ಳೆ ರಾಜೀನಾಮೆ ಸಂಬಂಧ ಟ್ವೀಟ್ ಮಾಡಿದ್ದಾರೆ. "ಜಂಬೋ" ಸ್ಥಾನ ತುಂಬುವುದು ತುಂಬಾ  ಕಠಿಣವಾದ ಕೆಲಸವೆಂದು ವಿರೇಂದ್ರ ಸೆಹ್ವಾಗ್ ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 
ನಾನು ಕುಂಬ್ಳೆ ಮಾರ್ಗದರ್ಶನದಲ್ಲಿ ಕ್ರಿಕೆಟ್ ಆಡಿಲ್ಲ. ಆದರೆ ಹಿರಿಯ ಆಟಗಾರನಾಗಿ, ನಮ್ಮ ನಾಯಕನಾಗಿ ಅವರನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ಇನ್ನೂ ವಿಶೇಷವೆಂದರೆ ಅವರ ನಾಯಕತ್ವದಿಂದಲೇ ನಾನು ತಂಡಕ್ಕೆ ಕಮ್'ಬ್ಯಾಕ್ ಮಾಡಲು ಸಾಧ್ಯವಾಯಿತು. ಕುಂಬ್ಳೆ ಮಾರ್ಗದರ್ಶನದಲ್ಲಿ ಕುಂಬ್ಳೆ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರಿದೆ.
ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾ ಕೋಚ್‌ ಆಗಿ ಯಾರೇ ಆಯ್ಕೆಯಾದರು ಕುಂಬ್ಳೆ ಸ್ಥಾನ ತುಂಬುವುದಕ್ಕೆ ಆಗುವುದಿಲ್ಲ  ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com