"ವಿರಾಟ್" ನಿವೃತ್ತಿ: ಟ್ವಿಟರ್ ನಲ್ಲಿ ವೈರಲ್ ಆದ ಸೆಹ್ವಾಗ್ ಟ್ವೀಟ್!

ಮಾಜಿ ಕ್ರಿಕೆಟಿಗೆ ವೀರೇಂದ್ರ ಸೆಹ್ವಾಗ್ ಮಾಡಿದ್ದ ಟ್ವೀಟ್ ವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.
ಸೆಹ್ವಾಗ್ ಟ್ವೀಟ್
ಸೆಹ್ವಾಗ್ ಟ್ವೀಟ್

ನವದೆಹಲಿ: ಮಾಜಿ ಕ್ರಿಕೆಟಿಗೆ ವೀರೇಂದ್ರ ಸೆಹ್ವಾಗ್ ಮಾಡಿದ್ದ ಟ್ವೀಟ್ ವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

ಭಾರತ ಮತ್ತು ವಿಶ್ವದ ಅತ್ಯಂತ ಹಳೆಯ ಯುದ್ಧ ನೌಕೆ ಐಎನ್ಎಸ್ ವಿರಾಟ್ ಇಂದು ಅಧಿಕೃತವಾಗಿ ಸೇವೆಗೆ ವಿದಾಯ ಹೇಳುತ್ತಿದ್ದು, ಇದೇ ವಿಚಾರದ ಹಿನ್ನಲೆಯಲ್ಲಿ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ವಿರಾಟ್ ನಿವೃತ್ತರಾಗುತ್ತಿದ್ದಾರೆ..  ಅತ್ಯಂತ ಹಳೆಯ ಯುದ್ಧ ನೌಕೆಗೆ ಎಂದಿಗೂ ಕೊನೆ ಇಲ್ಲ. 30 ವರ್ಷಗಳ ಸಾರ್ಥಕ ಸೇವೆಯ ಬಳಿಕವೂ ಎಂದೆಂದಿಗೂ ನಮ್ಮ ಮನದಲ್ಲಿ ಐಎನ್ಎಸ್ ವಿರಾಟ್ ಇರುತ್ತದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದರು.

ಆದರೆ ಸೆಹ್ವಾಗ್ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲ ಟ್ವೀಟಿಗರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಿವೃತ್ತಿ ಕುರಿತಂತೆ ಸೆಹ್ವಾಗ್ ಮಾತನಾಡುತ್ತಿದ್ದಾರೆ ಎಂದು ಭಾವಿಸಿ ಟ್ವಿಟರ್ ನಲ್ಲಿ ಆಘಾತ ವ್ಯಕ್ತಪಡಿಸಿದ್ದರು.  ಬಳಿಕ ಐಎನ್ಎಸ್ ವಿರಾಟ್ ಯುದ್ಧನೌಕೆಯ ನಿವೃತ್ತಿ ಎಂದು ಮನವರಿಕೆ ಮಾಡಿಕೊಂಡಿದ್ದಾರೆ.

ಪ್ರತೀ ಭಾರಿ ತಮ್ಮ ವಿಶೇಷ ಟ್ವೀಟ್ ಗಳ ಮೂಲಕ ಗಮನ ಸೆಳೆಯುವ ಸೆಹ್ವಾಗ್ ಈ ಬಾರಿಯೂ ಮತ್ತೊಂದು ಟ್ವೀಟ್ ನ ಮೂಲಕ ಟ್ವೀಟಿಗರ ಗಮನ ಸೆಳೆದಿದ್ದಾರೆ. ಇದೀಗ ಸೆಹ್ವಾಗ್ ಮಾಡಿರುವ ಈ ಟ್ವೀಟ್ ಸಾಮಾಜಿಕ  ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com