ಡಿಆರ್‌ಎಸ್‌ ವಿವಾದ: ಕೊಹ್ಲಿ, ಸ್ಮಿತ್‌ ವಿರುದ್ಧ ಐಸಿಸಿಯಿಂದ ಯಾವುದೇ ಶಿಸ್ತುಕ್ರಮ ಇಲ್ಲ!

ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ಡಿಆರ್ ಎಸ್ ಮನವಿಗೆ ಸಂಬಂಧಿಸಿದಂತೆ ಎದ್ದಿದ್ದ ವಿವಾದ ಸಂಬಂಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆಸಿಸ್ ನಾಯಕ ಸ್ಟೀವ್ ಸ್ಮಿತ್ ವಿರುದ್ಧ ಯಾವುದೇ ರೀತಿಯ ಶಿಸ್ತುಕ್ರಮ ಕೈಗೊಳ್ಳುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ಡಿಆರ್ ಎಸ್ ಮನವಿಗೆ ಸಂಬಂಧಿಸಿದಂತೆ ಎದ್ದಿದ್ದ ವಿವಾದ ಸಂಬಂಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆಸಿಸ್ ನಾಯಕ ಸ್ಟೀವ್ ಸ್ಮಿತ್ ವಿರುದ್ಧ ಯಾವುದೇ  ರೀತಿಯ ಶಿಸ್ತುಕ್ರಮ ಕೈಗೊಳ್ಳುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ತಿಳಿಸಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಐಸಿಸಿ ಪ್ರಧಾನ ಕಾರ್ಯದರ್ಶಿ ಡೇವಿಡ್‌ ರಿಚರ್ಡ್‌ ಸನ್‌  ಅವರು, "ಪಂದ್ಯದ ಬಳಿಕ ಎರಡು ತಂಡಗಳ ಆಟಗಾರರು ಭಾವನಾತ್ಮಕ ಸನ್ನಿವೇಶ ಎದುರಿಸಿದ್ದಾರೆ. ಈ ಸಂದರ್ಭದಲ್ಲಿ  ಉಂಟಾದ ಗೊಂದಲದಲ್ಲಿ ಈ ರೀತಿಯ ಘಟನೆ ನಡೆದಿರಬಹುದು. ಇದನ್ನು ಮರೆತು ಮುಂಬರುವ ರಾಂಚಿ ಟೆಸ್ಟ್‌ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ತೋರದೆ ಆಟವಾಡಬೇಕು. ಪಂದ್ಯ ಆರಂಭಕ್ಕೂ ಮೊದಲು ಎರಡು ತಂಡದ  ನಾಯಕರನ್ನು ಕರೆದು ಅವರವರ ಜವಾಬ್ದಾರಿ ನೆನೆಸಬೇಕೆಂದು ಅವರು ಹೇಳಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯಗೊಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 75 ರನ್‌ ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿತ್ತು. ಇದಕ್ಕೂ ಮೊದಲ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್  ಬ್ಯಾಟಿಂಗ್ ಮಾಡುವ ವೇಳೆ ಸ್ಟೀವ್ ಸ್ಮಿತ್ ಡಿಆರ್ ಎಸ್ ಮನವಿ ಮಾಡುವ ಮುನ್ನ ಪೆವಿಲಿಯನ್ ನಲ್ಲಿದ್ದ ಸಹ ಆಟಗಾರರತ್ತ ನೋಡಿದ್ದರು. ಆ ಮೂಲಕ ಮನವಿ ಮಾಡಬೇಕೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಕೇಳಿದ್ದರು. ಇದಕ್ಕೆ ಆನ್  ಫೀಲ್ಡ್ ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿಯೂ ಕೊಹ್ಲಿ ಅವರು ಡಿಆರ್‌ಎಸ್‌ ನಿಯಮ ಉಲ್ಲಂಘನೆ ಕುರಿತು ಪ್ರಸ್ತಾಪಿಸಿದ್ದರು.

ಡಿಆರ್‌ಎಸ್‌ ಅವಕಾಶ ಬಳಸಿಕೊಳ್ಳುವ ಮುನ್ನ ಆಸ್ಟ್ರೇಲಿಯಾ ಆಟಗಾರರು ಪೆವಿಲಿಯನ್‌ ನಲ್ಲಿ ಕುಳಿತ ಸಹ ಆಟಗಾರರು ಮತ್ತು ಸಿಬ್ಬಂದಿಯತ್ತ ನೋಡುತ್ತಿದ್ದರು. ಇದು ಡಿಆರ್‌ಎಸ್‌ ನಿಯಮ ಉಲ್ಲಂಘನೆ ಎಂದು ಕೊಹ್ಲಿ ಕಿಡಿಕಾರಿದ್ದರು.  ಇದಕ್ಕೆ ಮರುಉತ್ತರ ನೀಡಿದ್ದ ಸ್ಮಿತ್‌, ಆ ರೀತಿಯ ಶಿಷ್ಟಾಚಾರ ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಇದನ್ನು ಪರಿಶೀಲಿಸಿರುವ ಐಸಿಸಿ, ಉಭಯ ತಂಡಗಳ ನಾಯಕರ ವಿರುದ್ಧ ಯಾವುದೇ ಶಿಸ್ತುಕ್ರಮ  ತೆಗೆದುಕೊಂಡಿಲ್ಲ. ಕೇವಲ ಎಚ್ಚರಿಕೆ ಮಾತ್ರ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿತ್ತು.

ಐಸಿಸಿಗೆ ಬಿಸಿಸಿಐ ದೂರು
ಇನ್ನು ಇದೇ ವೇಳೆ ಸ್ಟೀವ್ ಸ್ಮಿತ್ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಈ ಬಗ್ಗೆ ಐಸಿಸಿಗೆ ದೂರು ನೀಡಲು ನಿರ್ಧರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com