ಕೊಠಡಿಯಲ್ಲೇ ಬ್ಯಾಟ್ ಮರೆತು ಬ್ಯಾಟಿಂಗ್ ಮಾಡಲು ಬಂದ ಕ್ರಿಕೆಟಿಗ!

ಆಸ್ಟ್ರೇಲಿಯಾದ ಕ್ರಿಕೆಟಿಗನೋರ್ವ ಬ್ಯಾಟಿಂಗ್ ಮಾಡುವ ಆತುರದಲ್ಲಿ ಬ್ಯಾಟ್ ಆನ್ನೇ ಮರೆತು ಕ್ರೀಡಾಂಗಣಕ್ಕೆ ಬಂದ ಘಟನೆ ಸಿಡ್ನಿಯಲ್ಲಿ ನಡೆದಿದೆ.
ಬ್ಯಾಟ್ ಮರೆತ ಫವಾದ್
ಬ್ಯಾಟ್ ಮರೆತ ಫವಾದ್

ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟಿಗನೋರ್ವ ಬ್ಯಾಟಿಂಗ್ ಮಾಡುವ ಆತುರದಲ್ಲಿ ಬ್ಯಾಟ್ ಆನ್ನೇ ಮರೆತು ಕ್ರೀಡಾಂಗಣಕ್ಕೆ ಬಂದ ಘಟನೆ ಸಿಡ್ನಿಯಲ್ಲಿ ನಡೆದಿದೆ.

ಪಾಕಿಸ್ತಾನ ಮೂಲದ ಕ್ರಿಕೆಟಿಗ ಫವಾದ್ ಅಹ್ಮದ್ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಶೇಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಬ್ಯಾಟ್ ಮರೆತು ಕ್ರೀಡಾಂಗಣಕ್ಕೆ ಇಳಿಯುವ ಮೂಲಕ ನಗೆ ಪಾಟಲಿಗೆ ಈಡಾಗಿದ್ದಾರೆ. ಶೇಫೀಲ್ಡ್ ಶೀಲ್ಡ್  ಟೂರ್ನಿಯಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ವಿಕ್ಟೋರಿಯಾ ತಂಡದ 11ನೇ ಕ್ರಮಾಂಕದ ಬ್ಯಾಟ್ಸ್​ ಮನ್ ಆಗಿ ಫವಾದ್ ಕಣಕ್ಕಿಳಿಯಬೇಕಿತ್ತು. 9ನೇ ವಿಕೆಟ್ ಉರುಳುತ್ತಿದ್ದಂತೆಯೇ ಹೆಲ್ಮೆಟ್, ಪ್ಯಾಡ್ ಮತ್ತು ಗ್ಲೌಸ್  ಸೇರಿದಂತೆ ಎಲ್ಲ ಪರಿಕರಗಳನ್ನು ಅಣಿ ಮಾಡಿಕೊಂಡ ಫವಾದ್ ಗ್ಲೌಸ್ ಅನ್ನು ತನ್ನ ಕಂಕುಳಿಗೆ ಸಿಕ್ಕಿಸಿಕೊಂಡು ಮೈದಾನದತ್ತ ಹೆಜ್ಜೆ ಹಾಕಿದರು.

ಮೈದಾನಕ್ಕೆ ಆಗಮಿಸುತ್ತಿದ್ದಂತೆಯೇ ಕೈಗಳಿಗೆ ಗ್ಲೌಸ್ ಹಾಕಿಕೊಂಡ ಫವಾದ್ ಗೆ ಬಳಿಕ ತಾನು ಬ್ಯಾಟ್ ಅನ್ನೇ ಮರೆತು ಬಂದಿರುವುದು ತಿಳಿಯಿತು. ಕೂಡಲೇ ಬ್ಯಾಟ್ ಗಾಗಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಆದರೆ ಅಷ್ಟು  ಹೊತ್ತಿಗಾಗಲೇ ಸಹ ಆಟಗಾರನೋರ್ವ ಫವಾದ್ ಗೆ ಬ್ಯಾಟ್ ತಂದು ಕೊಟ್ಟರು. ಫವಾದ್ ಅವರ ಈ ಮರೆಗುಳಿ ತನ ಆ ಕ್ಷಣಕ್ಕೆ ಇಡೀ ಕ್ರೀಡಾಂಗಣದಲ್ಲಿ ತಮಾಷೆಯಾಗಿ ಪರಿಣಮಿಸಿತ್ತು. ಅಲ್ಲಿ ನೆರೆದಿದ್ದವರೆಲ್ಲರೂ ಒಂದಷ್ಟು ಹೊತ್ತು  ನಕ್ಕರು.

ಆಸ್ಟ್ರೇಲಿಯಾ ಏಕದಿನ ತಂಡದ ಸ್ಪಿನ್ನರ್ ಕೂಡ ಆಗಿರುವ ಪಾಕಿಸ್ತಾನ ಮೂಲದ ಫವಾದ್ ಈ ಘಟನೆಯಿಂದ ಎದುರಾಳಿ ತಂಡದ ಆಟಗಾರರ ನಗೆಪಾಟಲಿಗೂ ಈಡಾದರು. ಕೊನೆಗೆ 35 ವರ್ಷದ ಅವರು 7 ಎಸೆತ ಎದುರಿಸಿ ಖಾತೆ  ತೆರೆಯದೆ ಔಟಾಗದೆ ಉಳಿದರು. ಇದಕ್ಕೂ ಮುನ್ನ ಅವರು ಬೌಲಿಂಗ್ ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ 14 ರನ್​ ಗೆ 3 ವಿಕೆಟ್ ಕಬಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com