ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವೀಂದ್ರ ಜಡೇಜಾ ಇದೀಗ ಬ್ಯಾಟಿಂಗ್ ನಲ್ಲಿ ಅದ್ಭುತ ಸಾಧನೆಯೊಂದನ್ನು ಮಾಡಿದ್ದಾರೆ. ಟೆಸ್ಟ್ ಋತುವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಅಗ್ರ ಆಟಗಾರನಾಗಿ ಜಡೇಜಾ ಹೊರಹೊಮ್ಮಿದ್ದಾರೆ.
2016-17ರ ವರ್ಷದಲ್ಲಿ ಜಡೇಜಾ ಇದುವರೆಗೂ 19 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಸಾಧನೆ ಈ ಹಿಂದೆ ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಹೆಸರಿನಲ್ಲಿತ್ತು. ಅವರು 2010-11ರ ಸಾಲಿನಲ್ಲಿ 17 ಸಿಕ್ಸರ್ ಗಳನ್ನು ಸಿಡಿಸುವುದರೊಂದಿಗೆ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿಟ್ಟುಕೊಂಡಿದ್ದರು.
ಇನ್ನು ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಎಂದೇ ಕರೆಯಲಾಗುತ್ತಿದ್ದ ವೀರೇಂದ್ರ ಸೆಹ್ವಾಗ್ 2003-04ರಲ್ಲಿ 16 ಸಿಕ್ಸರ್ ಸಿಡಿಸಿದ್ದ ಸಾಧನೆ ಮಾಡಿದ್ದರು.