ಧೋನಿ ಕಮ್ ಬ್ಯಾಕ್; ನಗುತ್ತಲೇ ಭರ್ಜರಿ ಸಿಕ್ಸರ್ ಸಿಡಿಸಿ ಕಿವೀಸ್ ಆಟಗಾರರಿಗೆ ಶಾಕ್ ನೀಡಿದ ಮಾಹಿ!

ಭಾನುವಾರ ಲಂಡನ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಯಿತಾದರೂ, ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರ ಭರ್ಜರಿ ರಸದೌತಣ ನೀಡಿತು.
ಧೋನಿ ಸಿಕ್ಸರ್
ಧೋನಿ ಸಿಕ್ಸರ್

ಲಂಡನ್: ಭಾನುವಾರ ಲಂಡನ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಯಿತಾದರೂ, ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರ ಭರ್ಜರಿ ರಸದೌತಣ ನೀಡಿತು.

ಪ್ರಮುಖವಾಗಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಆಟ ಧೋನಿ ಆರಂಭಿಕ ದಿನಗಳನ್ನು ಅಭಿಮಾನಿಗಳಿಗೆ ನೆನಪಿಸುವಂತಿತ್ತು. ಪಂದ್ಯ ಮಳೆಯಿಂದಾಗಿ ರದ್ದಾಗುವ ಮುನ್ನ ಮಾಹಿ 21 ಎಸೆತಗಳಲ್ಲಿ  17 ರನ್ ಗಳಿಸಿದ್ದರು. ಈ ಪೈಕಿ ಅದಾಗಲೇ ಧೋನಿ 2 ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ಸಿಡಿಸಿದ್ದರು. 3ನೇ ವಿಕೆಟ್ ರೂಪದಲ್ಲಿ ದಿನೇಶ್ ಕಾರ್ತಿಕ್ ಔಟ್ ಆಗುತ್ತಿದ್ದಂತೆಯೇ ಕ್ರೀಸ್ ಗೆ ಬಂದ ಧೋನಿ ವಿರಾಟ್ ಕೊಹ್ಲಿ  ಜೊತೆಗೂಡಿದರು. ಬಳಿಕ ಒಂದು ಬೌಂಡರಿಯೊಂದಿಗೆ 7 ರನ್ ಗಳಿ ಕ್ರೀಸ್ ನಲ್ಲಿದ್ದ ಧೋನಿ 25ನೇ ಓವರ್ ನಲ್ಲಿ ಕಿವೀಸ್ ಬೌಲರ್ ಬೌಲ್ಟ್ ಗೆ ಶಾಕ್ ನೀಡಿದರು.

25ನೇ ಓವರ್ ನ 3ನೇ ಎಸೆತನವನ್ನು ಬೌಲ್ಟ್ ಬೌನ್ಸರ್ ಎಸೆಯುತ್ತಿದ್ದಂತೆಯೇ ಧೋನಿ ಜಂಪ್ ಮಾಡುತ್ತ ಶಾರ್ಟ್ ಮತ್ತು ವೈಡ್ ಔಟ್ ಸೈಡ್ ನತ್ತ ಬಲವಾಗಿ ಭಾರಿಸಿದರು. ಬೌಂಡರಿ ಲೈನ್ ತುದಿಯಲ್ಲಿ ನಾಯಕ ಕೇನ್  ವಿಲಿಯಮ್ಸನ್ ಧೋನಿ ಹೊಡೆತವನ್ನು ಕ್ಯಾಚ್ ಪಡೆದರು ಎನ್ನುವಷ್ಟರಲ್ಲಿ ಅತೀ ವೇಗದಿಂದ ಕೂಡಿದ್ದ ಹೊಡೆತವನ್ನು ವಿಲಿಯಮ್ಸನ್ ಹಿಡಿತಕ್ಕೆ ಪಡೆಯುವಲ್ಲಿ ವಿಫಲರಾದರು. ಬಾಲ್ ಬೌಂಡರಿ ಗೆರೆ ದಾಟಿ ಸಿಕ್ಸರ್ ಗೆ ಹೋಗಿತ್ತು. ಇದು ಆ  ಎಸೆತವನ್ನು ಭಾರಿಸಿದ ಧೋನಿ ಸೇರಿದಂತೆ ಕ್ರೀಡಾಂಗಣದಲ್ಲಿ ಉಳಿದಿದ್ದ ಎಲ್ಲರೂ ಅಚ್ಚರಿಯೊಂದಿಗೆ ಮುಗುಳ್ನಗೆ ಬೀರುವಂತೆ ಮಾಡಿತ್ತು.

ಬೌಲರ್ ಬೌಲ್ಟ್ ಕೂಡ ಸುಮ್ಮನೇ ನಕ್ಕು ತಮ್ಮ ಮುಂದಿನ ಎಸೆತಕ್ಕೆ ಸಿದ್ಧರಾದರು. ಧೋನಿ ಅವರ ಈ ಹೊಡೆತ ಅವರ ವೃತ್ತಿಪರ ಕ್ರಿಕೆಟ್ ಜೀವನದ ಹೊಡೆತಗಳನ್ನು ನೆನಪಿಸುವಂತಿತ್ತು ಎಂದು ವೀಕ್ಷಕ ವಿವರಣೆಗಾರರು  ಅಭಿಪ್ರಾಯಪಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com