ಟಾಸ್ ಗೆದ್ದ ಕೋಹ್ಲಿ ಪಡೆ ಬೌಲಿಂಗ್ ನ್ನು ಆಯ್ಕೆ ಮಾಡಿಕೊಂಡಿತು. 18.4 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮಳೆ ಅಡ್ಡಿಯಾಯಿತು. ಆಸ್ಟ್ರೇಲಿಯಾ ತಂಡ 20 ಓವರ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಮಳೆ ಮುಂದುವರೆದ ಪರಿಣಾಮ ಭಾರತ ತಂಡದ ಬ್ಯಾಟಿಂಗ್ ಗೂ ಅಡ್ಡಿಯಾಯಿತು. ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತಕ್ಕೆ 6 ಓವರ್ ಗಳಲ್ಲಿ 48 ರನ್ ಟಾರ್ಗೆಟ್ ನೀಡಲಾಯಿತು.