ಅಶ್ವಿನ್, ಜಡೇಜಾಗೆ ಪ್ರತಿಸ್ಫರ್ಧಿಯಾಗಿದ್ದಾರೆ ಚಹಾಲ್, ಕುಲ್ದೀಪ್

ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆ ಸಮಿತಿ...
ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್
ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್
Updated on: 
ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆ ಸಮಿತಿ ಮತ್ತೊಮ್ಮೆ ಅವರನ್ನು ಪರಿಗಣಿಸದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 
ನ್ಯೂಜಿಲೆಂಡ್ ಸರಣಿಗೆ ಇಬ್ಬರು ಸ್ಟಾರ್ ಆಟಗಾರರು ಆಯ್ಕೆಯಾಗದೇ ಇರುವುದು ಇಬ್ಬರ ಸೀಮಿತ ಓವರ್ ವೃತ್ತಿ ಬದುಕು ನಿಧಾನವಾಗಿ ಅಂತ್ಯಗೊಳ್ಳುವತ್ತ ಸಾಗಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗಲು ಕಾರಣವಾಗಿದೆ. 
2019ರ ಏಕದಿನ ವಿಶ್ವಕಪ್ ಗೆ ತಂಡ ಈಗಗಾಲೇ ತಯಾರಿ ಆರಂಭಿಸಿದ್ದು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಂತಹ ಬಲಿಷ್ಠ ತಂಡಗಳು ಮಣಿಕಟ್ಟು ಸ್ಪಿನ್ನರ್ ಗಳನ್ನು ಎದುರಿಸಲು ಪರದಾಡುತ್ತಿರುವುದನನು ಬಿಸಿಸಿಐ ಆಯ್ಕೆ ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಇದೇ ಕಾರಣದಿಂದ ಜಡೇಜಾ, ಅಶ್ವಿನ್ ರನ್ನು ಹೊರಗಿಟ್ಟು ಚಹಾಲ್, ಕುಲ್ದೀಪ್ ಗೆ ಮಣೆ ಹಾಕಲಾಗುತ್ತಿದೆ. 
ಶ್ರೀಲಂಕಾದಲ್ಲಿ ಟೆಸ್ಟ್ ಆಡಿದ ಬಳಿಕ ಅಶ್ವಿನ್ ಹಾಗೂ ಜಡೇಜಾ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶ ಪಡೆದಿಲ್ಲ. ಲಂಕಾ ವಿರುದ್ಧ ಸೀಮಿತ ಓವರ್ ಸರಣಿಗೆ ಇಬ್ಬರಿಗೂ ವಿಶ್ರಾಂತಿ ನೀಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com