ಪಾಕಿಸ್ತಾನ ವೇಗಿ ನನ್ನನ್ನು ಹೆಚ್ಚು ಕಾಡಿದ ಬೌಲರ್: ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಬ್ಯಾಟ್ ಹಿಡಿದು ಆರ್ಭಟಿಸಲು ನಿಂತರೇ ಎದುರಾಳಿ ಪಕ್ಷದ ಬೌಲರ್ ಗಳಲ್ಲಿ ನಡುಕ ಶುರುವಾಗುತ್ತದೆ...
ವಿರಾಟ್ ಕೊಹ್ಲಿ-ಮೊಹಮ್ಮದ್ ಅಮೀರ್
ವಿರಾಟ್ ಕೊಹ್ಲಿ-ಮೊಹಮ್ಮದ್ ಅಮೀರ್
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಬ್ಯಾಟ್ ಹಿಡಿದು ಆರ್ಭಟಿಸಲು ನಿಂತರೇ ಎದುರಾಳಿ ಪಕ್ಷದ ಬೌಲರ್ ಗಳಲ್ಲಿ ನಡುಕ ಶುರುವಾಗುತ್ತದೆ. ಅಂತಹದರಲ್ಲಿ ಕೊಹ್ಲಿಯನ್ನೇ ಪಾಕಿಸ್ತಾನದ ವೇಗಿಯೊಬ್ಬ ಹೆಚ್ಚು ಕಾಡಿದ ಎಂದು ಸ್ವತಃ ಕೊಹ್ಲಿಯೇ ಹೇಳಿಕೊಂಡಿದ್ದಾರೆ. 
ಬಾಲಿವುಡ್ ನಟ ಅಮೀರ್ ಖಾನ್ ಜತೆಗಿನ ಸಂದರ್ಶನದ ವೇಳೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪ್ರಸಕ್ತ ಬೌಲರ್ ಗಳ ಪೈಕಿ ತನ್ನನ್ನು ಹೆಚ್ಚು ಕಾಡಿದ್ದು, ತನ್ನ ಪಾಲಿನ ಬೆಸ್ಟ್ ಬೌಲರ್ ಎಂದರೆ ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಬೌಲಿಂಗ್ ನಲ್ಲಿ ನಿಮ್ಮನ್ನು ಹೆಚ್ಚಾಗಿ ಕಾಡಿದ ಬೌಲರ್ ಯಾರು ಎಂದು ಕೇಳಿದ ಪ್ರಶ್ನೆಗೆ ವಿರಾಟ್ ಕೊಹ್ಲಿ, ಪ್ರಸ್ತುತ ಹೆಚ್ಚು ಸವಾಲಾಗಿ ಕಾಡಿದವರು ಎಂದರೇ ಪಾಕಿಸ್ತಾನದ ಮೊಹಮ್ಮದ್ ಅಮೀರ್ ಅವರೇ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರನ್ನು ಎದುರಿಸುವಾಗ ನೀವು ನಿಮ್ಮ ಉತ್ಕೃಷ್ಟ ಜಾಣತನ ಪ್ರದರ್ಶಿಸಬೇಕಾಗುತ್ತದೆ. ಅವರು ನಿಜಕ್ಕೂ ಕಠಿಣ ಸವಾಲೆಸೆಯುತ್ತಾರ ಎಂದು ಕೊಹ್ಲಿ ಹೇಳಿದ್ದಾರೆ.
ಆ ಮೂಲಕ ಸಾಂಪ್ರದಾಯಿಕ ಎದುರಾಳಿ ತಂಡದ ವೇಗಿಯನ್ನು ವಿರಾಟ್ ಕೊಹ್ಲಿ ಹೊಗಳಿದ್ದಾರೆ. ಇನ್ನು ಹಲವು ಬಾರಿ ಅಮೀರ್ ಕೊಹ್ಲಿ ವಿಕೆಟ್ ಕಬಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com