ಅಂತೆಯೇ ತಮ್ಮ ತಂಡದ ಆಟಗಾರರ ಪ್ರದರ್ಶನದ ಕುರಿತು ಸಕಾರಾತ್ಮಕವಾಗಿರುವ ಸ್ಮಿತ್, ಭಾರತದ ಪಿಚ್ ಗಳು ಸ್ಪಿನ್ನರ್ ಗಳಿಗೆ ನೆರವಾಗುತ್ತದೆ. ಹೀಗಾಗಿ ತಂಡದಲ್ಲಿ ಮೂವರು ಸ್ಪಿನ್ನರ್ ಗಳಿಗೆ ಅವಕಾಶ ಮಾಡಿಕೊಡಲಾಗಿದೆ. ತಂಡದ ಬ್ಯಾಟಿಂಗ್ ಉತ್ತಮವಾಗಿದ್ದು, ಫೀಲ್ಡಿಂಗ್ ಕೂಡ ಸುಧಾರಿಸಿದೆ. ಅಂತೆಯೇ ಭಾರತದ ಸ್ಪಿನ್ನರ್ ಗಳನ್ನು ಎದುರಿಸುಲು ನಾವೂ ಕೂಡ ಸಜ್ಜಾಗಿದ್ದು, ಭಾರತದ ಅಕ್ಸರ್ ಪಟೇಲ್ ಹಾಗೂ ಯಜುವೇಂದ್ರ ಚಾಹಲ್ ಉತ್ತಮ ಫಾರ್ಮ ನಲ್ಲಿದ್ದಾರೆ. ಕುಲದೀಪ್ ಯಾದವ್ ಕೂಡ ವಿಕೆಟ್ ಪಡೆಯುವ ಬೌಲರ್ ಆಗಿದ್ದು, ಇವರನ್ನು ಎದುರಿಸಲು ಯೋಜನೆ ರೂಪಿಸಲಾಗಿದೆ ಎಂದು ಸ್ಮಿತ್ ತಿಳಿಸಿದರು.