ಮೈದಾನದಲ್ಲೇ ಕೇದಾರ್ ಜಾದವ್‌ಗೆ ಧೋನಿ ಕೆಂಗಣ್ಣು ಬೀರಿದ್ದೇಕೆ ಗೊತ್ತಾ!

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯರ ಅರ್ಧ ಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 26...
ಎಂಎಸ್ ಧೋನಿ, ಕೇದಾರ್ ಜಾದವ್
ಎಂಎಸ್ ಧೋನಿ, ಕೇದಾರ್ ಜಾದವ್
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯರ ಅರ್ಧ ಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 26 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. 
ಎಂಎಸ್ ಧೋನಿ 79 ರನ್ ಗಳನ್ನು ಸಿಡಿಸಿದ್ದು ಟೀಂ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. ಆದರೆ ಧೋನಿ 7 ರನ್ ಗಳಿಸಿದ್ದಾಗ ರನ್ ಔಟ್ ಗೆ ಬಲಿಯಾಗಬೇಕಿತ್ತು. ಹಾಗೇನಾದರೂ ಆಗಿದ್ದರೆ ಫಲಿತಾಂಶ ಬೇರೆಯದ್ದಾಗಿರುತ್ತಿತ್ತು. ಆರಂಭಿಕ ಆಟಗಾರರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಮೈದಾನಕ್ಕಿಳಿದ ಧೋನಿ ನಿಧಾನಗತಿಯಲ್ಲಿ ಆಡುತ್ತಿದ್ದರು. ಈ ವೇಳೆ ಧೋನಿಗೆ ಸಾಥ್ ನೀಡಿದ ಕೇದಾರ್ ಜಾದವ್ ರ ಎಡವಟ್ಟಿನಿಂದಾಗಿ ಧೋನಿ 7 ರನ್ ಗಳಿಸಿದ್ದಾಗ ರನ್ ಔಟ್ ಆಗಬೇಕಿತ್ತು. 
22ನೇ ಓವರ್ ನಲ್ಲಿ ಧೋನಿ ಆಫ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿ ಸಿಂಗಲ್ ರನ್ ತೆಗೆದುಕೊಳ್ಳಲು ಮುಂದಾದರು. ಈ ವೇಳೆ ಕೇದಾರ್ ಜಾದವ್ ರನ್ ಗಾಗಿ ಓಡದೇ ನಾನ್ ಸ್ಟ್ರೇಕ್ ನಲ್ಲೇ ನಿಂತು ಬಿಟ್ಟರು. ಇದನ್ನು ಗಮನಿಸದ ಧೋನಿ ಅರ್ಧ ಕ್ರಿಸ್ ಗೆ ಬಂದು ನೋಡುತ್ತಾರೆ ಕೇದಾರ್ ಜಾದವ್ ಓಡದೇ ಸುಮ್ಮನೆ ನಿಂತಿದ್ದಾರೆ. ಕೂಡಲೇ ಧೋನಿ ಹಿಂದಕ್ಕೆ ಓಡಲು ಮುಂದಾದರೂ ಅಷ್ಟರಲ್ಲೇ ಹಿಲ್ಟನ್ ಕಾರ್ಟ್ರೈಟ್ ಚೆಂಡನ್ನು ವಿಕೆಟ್ ಗೆ ಎಸೆದರೂ ಆದರೆ ಚೆಂಡು ವಿಕೆಟ್ ಗೆ ಬೀಳದ ಕಾರಣ ಧೋನಿ ರನ್ ಔಟ್ ನಿಂದ ಬಚಾವ್ ಆಗಿದ್ದರು.
ಇದರಿಂದ ಕೋಪಗೊಂಡ ಧೋನಿ ಕೇದಾರ್ ಜಾದವ್ ಕಡೆ ತಿರುಗಿ ಕೆಂಗಣ್ಣು ಬೀರಿದರು. ತಾನು ರನ್ ಔಟ್ ಆಗಿದ್ದರೆ ತಂಡದ ಪರಿಸ್ಥಿತಿ ಏನು ಎಂದು ಧೋನಿ ಮನಸ್ಸಿನಲ್ಲೇ ಲೆಕ್ಕ ಹಾಕಿದ್ದರು ಅನಿಸುತ್ತೆ. ಅದೃಷ್ಟವಶಾತ್ ಧೋನಿ ರನ್ ಔಟ್ ನಿಂದ ಪಾರಾಗಿದ್ದರು. ಆದರೆ ಇದಾದ ನಂತರದ ಎಸೆತದಲ್ಲೇ ಜಾದವ್ ಕಾರ್ಟ್ರೈಟ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com