ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ಪಾಲಿಗೆ ಆಪತ್ಬಾಂಧವನಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕನಾದಾಗಿನಿಂದ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ಈ ಬಗ್ಗೆ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದ್ದು ಧೋನಿಯಲ್ಲಿನ ಈಗಿನ ಬದಲಾವಣೆಗೆ ಕೊಹ್ಲಿ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚೆನ್ನೈ ನಲ್ಲಿ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ 100 ನೇ ಅರ್ಥಶತಕ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದರು. ಅಷ್ಟೇ ಅಲ್ಲದೇ ಭಾರತ ಗೆಲ್ಲುವುದರಲ್ಲಿ ಎಂಎಸ್ ಧೋನಿ- ಪಾಂಡ್ಯ ಆಟ ಮಹತ್ವದ ಪಾತ್ರ ವಹಿಸಿತ್ತು.
ಎಂಎಸ್ ಧೋನಿ ಅವರ ಆಟದಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಬದಲಾವಣೆಗೆ ಕೊಹ್ಲಿ ಕಾರಣ ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದು, ಹಾರ್ದಿಕ್ ಪಾಂಡ್ಯ ಆಟದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿ, ಪಾಂಡ್ಯ ಅತ್ಯುತ್ತಮವಾಗಿ ಆಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.