ಸ್ವಿಂಗ್ ಮಾಡುವುದು ಗೊತ್ತಿತ್ತು, ಈಗ ವೇಗವಾಗಿ ಸ್ವಿಂಗ್ ಮಾಡುವುದು ಕರಗತವಾಗಿದೆ: ಭುವನೇಶ್ವರ್

ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ...
ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್
ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಇದೀಗ ವಿಕೆಟ್ ಪಡೆದರ ಬಗ್ಗೆ ಹೇಳಿಕೊಂಡಿದ್ದಾರೆ. 
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಹಾಗೂ ಹಿಲ್ಟನ್ ಕಾರ್ಟ್‌ರೈಟ್ ಅವರನ್ನು ಭುವನೇಶ್ವರ್ ಕುಮಾರ್ ಸ್ವಿಂಗ್ ಬಲೆಗೆ ಬೀಳಿಸಿದ್ದರು. ನನಗೆ ಸ್ವಿಂಗ್ ಮಾಡಲು ಬರುತ್ತಿತ್ತು. ಆದರೆ ಈಗ ವೇಗವಾಗಿ ಸ್ವಿಂಗ್ ಮಾಡಲು ಬರುತ್ತದೆ ಎಂದು ಹೇಳಿದ್ದಾರೆ. 
ಅಂತಿಮ ಓವರ್ ಗಳಲ್ಲಿ ವೇಗವಾಗಿ ಸ್ವಿಂಗ್ ಮಾಡುವ ಮೂಲಕ ಎದುರಾಳಿ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕುವ ಕಲೆ ಈಗ ನನಗೆ ಚನ್ನಾಗಿ ಕರಗತವಾಗಿದೆ ಎಂದರು. ಇನ್ನು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾಗ ನಾನು ನಿಧಾನಗತಿಯಲ್ಲಿ ಸ್ವಿಂಗ್ ಮಾಡುತ್ತಿದ್ದೇ. ಇದಕ್ಕೆ ವೇಗವಾಗಿ ಸ್ವಿಂಗ್ ಮಾಡುತ್ತೇನೆ ಎಂದು ಹೇಳಿದ್ದಾರೆ. 
ಸ್ಲಾಗ್ ಓವರ್ ಗಳಲ್ಲಿ ಸ್ವಿಂಗ್ ಮಾಡುವಂತೆ ಕೋಚ್ ಶಂಕರ್ ಬಸು ಅವರು ಟ್ವೀಪ್ಸ್ ನೀಡಿದ್ದರು. ಜತೆಗೆ ವೇಗವಾಗಿ ಸ್ವಿಂಗ್ ಮಾಡುವುದನ್ನು ಕಲಿಯುವಂತೆ ಹೇಳಿದ್ದರು. ಅವರ ಮಾತಿನಂತೆ ನಾನು ವೇಗವಾಗಿ ಸ್ವಿಂಗ್ ಮಾಡಲು ಆರಂಭಿಸಿದೆ. ಇದೀಗ ಡೆತ್ ಓವರ್ ಗಳಲ್ಲಿ ಸುಲಭವಾಗಿ ವೇಗವಾಗಿ ಸ್ವಿಂಗ್ ಮಾಡುತ್ತೇನೆ. ಇದರಿಂದ ಎದುರಾಳಿ ಆಟಗಾರರನ್ನು ಸುಲಭವಾಗಿ ಕಟ್ಟಿ ಹಾಕಲು ಸಾಧ್ಯವಾಗಿದೆ ಎಂದರು. 
ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ 6.1 ಓವರ್ ನಲ್ಲಿ 2 ಮೇಡಿನ್ ಮಾಡಿ 9 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಇದರಿಂದಾಗಿ ಭಾರತ ಆಸ್ಟ್ರೇಲಿಯಾ ವಿರುದ್ಧ 50 ರನ್ ಗಳಿಂದ ಜಯ ಗಳಿಸಲು ಸಾಧ್ಯವಾಯಿತು. ಇನ್ನು ಐದು ಏಕದಿ ನ ಪಂದ್ಯಗಳ ಸರಣಿಯಲ್ಲಿ ಸದ್ಯ ಭಾರತ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com