ಸರಣಿಯುದ್ದಕ್ಕೂ ಕಾಂಗರೂಗಳ ಕಾಡಿದ ಹಾರ್ದಿಕ್ ಪಾಂಡ್ಯಾಗೆ ಸರಣಿ ಶ್ರೇಷ್ಠ ಪ್ರಶಸ್ತಿ!

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯುದ್ಧಕ್ಕೂ ಸ್ಟೀವ್ ಸ್ಮಿತ್ ಪಡೆಯನ್ನು ಕಾಡಿದ ಭಾರತದ ಹಾರ್ದಿಕ್ ಪಾಂಡ್ಯಾಗೆ ಅರ್ಹವಾಗಿಯೇ ಸರಣಿ ಶ್ರೇಷ್ಟ ಪ್ರಶಸ್ತಿ ನೀಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನಾಗಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯುದ್ಧಕ್ಕೂ ಸ್ಟೀವ್ ಸ್ಮಿತ್ ಪಡೆಯನ್ನು ಕಾಡಿದ ಭಾರತದ ಹಾರ್ದಿಕ್ ಪಾಂಡ್ಯಾಗೆ ಅರ್ಹವಾಗಿಯೇ ಸರಣಿ ಶ್ರೇಷ್ಟ ಪ್ರಶಸ್ತಿ ನೀಡಲಾಗಿದೆ.
ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯಾ ಒಟ್ಟು 222 ರನ್ ಗಳು ಹಾಗೂ 6 ವಿಕೆಟ್ ಗಳನ್ನು ಪಡೆದಿದ್ದಾರೆ. ಪ್ರಮುಖವಾಗಿ ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯ (83  ರನ್, 2 ವಿಕೆಟ್) ಹಾಗೂ ಇಂದೋರ್ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯ (78 ರನ್, 1 ವಿಕೆಟ್)ದಲ್ಲಿ ಹಾರ್ದಿಕ್ ಪಾಂಡ್ಯಾ ಸ್ಫೋಟಕ ಆಟದಿಂದಾಗಿ ಭಾರತ ಗೆದ್ದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com