'ಭಯಭೀತ ಬಾವಲಿಗಳು'; ಟೀಂ ಇಂಡಿಯಾ ಹೀಗಳೆದ ಆಸಿಸ್ ಮಾಧ್ಯಮಗಳ ತರಾಟೆಗೆ ತೆಗೆದುಕೊಂಡ ಆಸ್ಟ್ರೇಲಿಯನ್ನರು!

ಅಸ್ಚ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಆಸಿಸ್ ಮಾಧ್ಯಮಗಳು ತಮ್ಮ ನೀಚ ಬುದ್ದಿಯ ಪ್ರದರ್ಶನ ಮಾಡಿದ್ದು, ಟೀಂ ಇಂಡಿಯಾ ಆಟಗಾರರನ್ನು ಭಯಭೀತ ಬಾವಲಿಗಳು ಎಂದು ಟೀಕಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಡಿಲೇಡ್: ಅಸ್ಚ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಆಸಿಸ್ ಮಾಧ್ಯಮಗಳು ತಮ್ಮ ನೀಚ ಬುದ್ದಿಯ ಪ್ರದರ್ಶನ ಮಾಡಿದ್ದು, ಟೀಂ ಇಂಡಿಯಾ ಆಟಗಾರರನ್ನು ಭಯಭೀತ ಬಾವಲಿಗಳು ಎಂದು ಟೀಕಿಸಿವೆ.
ಮೊದಲವ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಅಡಿಲೇಡ್ ಕಾಲಿಟ್ಟ ಸುದ್ದಿ ಪ್ರಕಟಿಸುವ ಭರದಲ್ಲಿ ಆಸ್ಟ್ರೇಲಿಯಾದ ಪ್ರಮುಖ ದೈನಿಕವೊಂದು ತನ್ನ ಸುದ್ದಿಗೆ 'The Scaredy Bats' (ಭಯಭೀತ ಬಾವಲಿಗಳು) ಎಂದು ಶೀರ್ಷಿಕೆ ನೀಡುವ ಮೂಲಕ ತನ್ನ ಸಣ್ಣ ತನವನ್ನು ಪ್ರದರ್ಶನ ಮಾಡಿದೆ.
ಪ್ರಸ್ತುತ ಈ ದೊಡ್ಡ ಪತ್ರಿಕೆಯ ಸಣ್ಣ ತನವನ್ನು ಸ್ವತಃ ಆಸ್ಟ್ರೇಲಿಯನ್ನರೇ ವಿರೋಧಿಸಿದ್ದು, ಟ್ವಿಟರ್​ನಲ್ಲಿ ಪತ್ರಿಕೆಯನ್ನು ತರಾಟೆಗೆ ತೆಗೆದುಕೊಂಡಿರುವ ಆಸ್ಟ್ರೇಲಿಯನ್ನರು ಈ ರೀತಿಯ ನಡೆ ದೇಶಕ್ಕೆ ಅವಮಾನ ತರುತ್ತದೆ ಎಂದು ಹೇಳಿದ್ದಾರೆ.​​  
ತಮ್ಮದೇ ದೇಶದ ಆಟಗಾರರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಬೆನ್​​ಕ್ರಾಫ್ಟ್​​ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿ ದೇಶಕ್ಕೇ ಕಳಂಕ ತಂದಿರುವ ವಿಚಾರ ಹಸಿಯಾಗಿರುವಾಗಲೇ ಅದೇ ನಾಡಿನ ಮಾಧ್ಯಮ, ಜಂಟಲ್​ಮ್ಯಾನ್​ ಆಟಕ್ಕೆ ಘನತೆ ತಂದಿರುವ ದೇಶವನ್ನು ಹೀಗಳೆಯುವ ಮೂಲಕ ತನ್ನ ಸಣ್ಣಬುದ್ಧಿ ಪ್ರದರ್ಶನ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com