ಕುತೂಹಲಕಾರಿ ಘಟ್ಟದಲ್ಲಿ ಮೊದಲ ಟೆಸ್ಟ್ ಪಂದ್ಯ: ಭೋಜನ ವಿರಾಮದ ವೇಳೆಗೆ ಭಾರತ 260/5, 275 ರನ್ ಗಳ ಮುನ್ನಡೆ

ಆಸ್ಚ್ರೇಲಿಯಾ ವಿರುದ್ಧ ಅಡಿಲೇಡ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದ್ದು, ಭೋಜನ ವಿರಾಮದ ವೇಳೆಗೆ ಭಾರತ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 260 ಗಳಿಸಿ ಒಟ್ಟಾರೆ 275 ರನ್ ಗಳ ಮುನ್ನಡೆ ಪಡೆದುಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಡಿಲೇಡ್: ಆಸ್ಚ್ರೇಲಿಯಾ ವಿರುದ್ಧ ಅಡಿಲೇಡ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದ್ದು, ಭೋಜನ ವಿರಾಮದ ವೇಳೆಗೆ ಭಾರತ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 260 ಗಳಿಸಿ ಒಟ್ಟಾರೆ 275 ರನ್ ಗಳ ಮುನ್ನಡೆ ಪಡೆದುಕೊಂಡಿದೆ.
ಪ್ರಮುಖವಾಗಿ ಮೊದಲ ಇನ್ನಿಂಗ್ಸ್ ನಲ್ಲಿ ಶತಕದ ಮೂಲಕ ಭಾರತದ ಇನ್ನಿಂಗ್ಸ್ ಗೆ ಜೀವ ತುಂಬಿದ್ದ ಚೇತೇಶ್ವರ ಪೂಜಾರ ಎರಡನೇ ಇನ್ನಿಂಗ್ಸ್ ನಲ್ಲೂ ತಾಳ್ಮೆಯ ಆಟದ ಮೂಲಕ ಅಮೂಲ್ಯ 71 ರನ್ ಗಳನ್ನು ಕಲೆಹಾಕಿದರು. ಪೂಜಾರಾಗೆ ಅಜಿಂಕ್ಯಾ ರಹಾನೆ ( 70 ರನ್) ಉತ್ತಮ ಸಾಥ್ ನೀಡಿದರು. 
ಇನ್ನು ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ 8 ವಿಕೆಟ್ ನಷ್ಚಕ್ಕೆ 303 ರನ್ ಗಳಿಸಿದ್ದು, ಒಟ್ಟಾರೆ 318ರನ್ ಗಳ ಮುನ್ನಡೆ ಸಾಧಿಸಿದೆ. 71 ರನ್ ಗಳಿಸಿದ್ದ ಪೂಜಾರ ಲಿಯಾನ್ ಬೌಲಿಂಗ್ ನಲ್ಲಿ ಔಟಾದರೆ, 70 ರನ್ ಗಳಿಸಿ  ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ರಹಾನೆ ಕೂಡ ಲಿಯಾನ್ ಬೌಲಿಂಗ್ ನಲ್ಲಿ ನಿರ್ಗಮಿಸಿದು. ರಿಷಬ್ ಪಂತ್ ಬಂದಷ್ಟೇ ವೇಗವಾಗಿ 16 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು.
ಇನ್ನು ಆಸ್ಟ್ರೇಲಿಯಾ ಪರ ಲಿಯಾನ್ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲದ ಐದು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರೆ, ಸ್ಟಾರ್ಕ್ 2 ಮತ್ತು ಹೇಜಲ್ ವುಡ್ ಒಂದು ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com