2ನೇ ಇನ್ನಿಂಗ್ಸ್ ನಲ್ಲಿ 307 ರನ್ ಗೆ ಭಾರತ ಆಲೌಟ್, ಆಸ್ಟ್ರೇಲಿಯಾಗೆ ಗೆಲ್ಲಲು 322 ರನ್ ಗಳ ಗುರಿ

ಆಸ್ಚ್ರೇಲಿಯಾ ವಿರುದ್ಧ ಅಡಿಲೇಡ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 2ನೇ ಇನ್ನಿಂಗ್ಸ್ ನಲ್ಲಿ 307 ರನ್ ಗಳಿಗೆ ಭಾರತ ತಂಡ ಆಲೌಟ್ ಆಗಿದ್ದು, ಆಸ್ಟ್ರೇಲಿಯಾಗೆ ಗೆಲ್ಲಲು 322 ರನ್ ಗಳ ಗುರಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಡಿಲೇಡ್: ಆಸ್ಚ್ರೇಲಿಯಾ ವಿರುದ್ಧ ಅಡಿಲೇಡ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 2ನೇ ಇನ್ನಿಂಗ್ಸ್ ನಲ್ಲಿ 307 ರನ್ ಗಳಿಗೆ ಭಾರತ ತಂಡ ಆಲೌಟ್ ಆಗಿದ್ದು, ಆಸ್ಟ್ರೇಲಿಯಾಗೆ ಗೆಲ್ಲಲು 322 ರನ್ ಗಳ ಗುರಿ ನೀಡಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಮಾಡಿದ ಮಾರಕ ಬೌಲಿಂಗ್ ಗೆ ಭಾರತದ  ಬಲಿಷ್ಛ ಬ್ಯಾಟಿಂಗ್ ಪಡೆ ನಾಲ್ಕನೇ ದಿನದಾಟದ ವೇಳೆ ಅಕ್ಷರಶಃ ನೆಲಕಚ್ಟಿತ್ತು, ನಿನ್ನೆ ಮೂರನೇ ದಿನದಾಟ ಮುಕ್ತಾಯದ ವೇಳೆಗೆ 151 ರನ್ ಗಳಿಸಿ ಮೂರು ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ ಇಂದು 307 ರನ್ ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ಚೇತೇಶ್ವರ ಪೂಜಾರ (71 ರನ್) ಮತ್ತು ಅಜಿಂಕ್ಯಾ ರಹಾನೆ (70 ರನ್) ಕೊಂಚ ಪ್ರಬಲ ಬ್ಯಾಟಿಂಗ್ ಪ್ರದರ್ಶನ ನೀಡಿದರು. 
ಆರಂದಲ್ಲಿ ಕೆಎಲ್ ರಾಹುಲ್ 44 ರನ್ ಗಳಿಸಿ ಭರವಸೆ ಮೂಡಿಸಿದ್ದರಾದರೂ ಆರ್ಧಶತಕ ಸಿಡಿಸುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ ಬಿರುಸಿನ ಆಟಕ್ಕೆ ಮುಂದಾಗಿ ಕೇವಲ 28 ರನ್ ಗಳಿಗೆ ವಿಕೆಟ್ ಕೈ ಚೆಲ್ಲಿದರು. ಕೆಳ ಕ್ರಮಾಂಕದಲ್ಲಿ ಅಶ್ವಿನ್  ರನ್ ಗಳಿಸಿದ್ದು ಬಿಟ್ಟರೆ, ಇಶಾಂತ್ ಶರ್ಮಾ ಮತ್ತು ಶಮಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಶೆ ಮೂಡಿಸಿದರು. ಆಂತಿಮವಾಗಿ ಭಾರತ ತಂಡ 307 ರನ್ ಗೆ ಭಾರತ ಆಲೌಟ್ ಆಗಿ ಆಸ್ಟ್ರೇಲಿಯಾಗೆ ಗೆಲ್ಲಲು 322 ರನ್ ಗಳ ಸವಾಲಿನ ಗುರಿ ನೀಡಿದೆ.
ಇನ್ನು ಆಸಿಸ್ ಪರ ನಾಥನ್ ಲಿಯಾನ್ 6 ವಿಕೆಟ್ ಕಬಳಿ ಯಶಸ್ವೀ ಬೌಲರ್ ಎನಿಸಿದರೆ, ಸ್ಟಾರ್ಕ್ 3 ವಿಕೆಟ್ ಕಿತ್ತು ಸಂಭ್ರಮಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com