ಕೆಎಲ್ ರಾಹುಲ್ ಹಿಡಿದಿದ್ದ ಅಡಿಲೇಡ್ ಟೆಸ್ಟ್ ಗೆಲುವಿನ ಕ್ಯಾಚ್ ಈಗ ವಿವಾದದಲ್ಲಿ, ವಿಡಿಯೋ ವೈರಲ್!

ಅಡಿಲೇಡ್ ಟೆಸ್ಟ್ ಪಂದ್ಯದ ರೋಚಕ ಗೆಲುವಿನೊಂದಿಗೆ ಟೀಂ ಇಂಡಿಯಾ ಆಸ್ಟ್ರೇಲಿಯಾದ 116 ವರ್ಷಗಳ ದಾಖಲೆಗೆ ತಣ್ಣೀರೆರೆಚಿತ್ತು. ಆದರೆ ಇದೇ ಪಂದ್ಯದ ಗೆಲುವಿನ ಕ್ಯಾಚ್ ಇದೀಗ ವಿವಾದಕ್ಕೆ ಕಾರಣವಾಗಿದೆ...
ಕೆಎಲ್ ರಾಹುಲ್
ಕೆಎಲ್ ರಾಹುಲ್
ಅಡಿಲೇಡ್ ಟೆಸ್ಟ್ ಪಂದ್ಯದ ರೋಚಕ ಗೆಲುವಿನೊಂದಿಗೆ ಟೀಂ ಇಂಡಿಯಾ ಆಸ್ಟ್ರೇಲಿಯಾದ 116 ವರ್ಷಗಳ ದಾಖಲೆಗೆ ತಣ್ಣೀರೆರೆಚಿತ್ತು. ಆದರೆ ಇದೇ ಪಂದ್ಯದ ಗೆಲುವಿನ ಕ್ಯಾಚ್ ಇದೀಗ ವಿವಾದಕ್ಕೆ ಕಾರಣವಾಗಿದೆ. 
ಆಸ್ಟ್ರೇಲಿಯಾದ ವಿರುದ್ಧ ಭಾರತ ಕೇವಲ 31 ರನ್ ಗಳಿಂದ ಗೆಲುವು ಸಾಧಿಸಿದೆ. ನಾಥನ್ ಲಿಯನ್ ಮತ್ತು ಹೇಜಲ್ ವುಡ್ ಜಿಗುಟು ಆಟವಾಡುತ್ತಿದ್ದು ಅಂತಿಮ ವಿಕೆಟ್ ಭಾರತದ ಪಾಲಿಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಈ ಸಂದರ್ಭದಲ್ಲಿ ಅಶ್ವಿನ್ ಎಸೆದ ಚೆಂಡನ್ನು ಹೇಜಲ್ ವುಡ್ ಸ್ಲಿಪ್ ಕಡೆಗೆ ತಳ್ಳಿದ. ಈ ವೇಳೆ ಸ್ಲಿಪ್ ನಲ್ಲಿದ್ದ ಕೆಎಲ್ ರಾಹುಲ್ ಕ್ಯಾಚ್ ಅನ್ನು ಹಿಡಿದರು. 
ಆದರೆ ಕೆಎಲ್ ರಾಹುಲ್ ಹಿಡಿದ ಇದೇ ಕ್ಯಾಚ್ ವಿವಾದಕ್ಕೆ ಗುರಿಯಾಗಿದೆ. ರಾಹುಲ್ ಕ್ಯಾಚನ್ನು ಹಿಡಿಯುವಾಗ ನೆಲಕ್ಕೆ ಹಾಕಿದ್ದರು ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಆರೋಪಿಸಿವೆ. ರಾಹುಲ್ ಕೈ ನೆಲಕ್ಕೆ ತಾಕಿತ್ತು. ಇದು ಕ್ಯಾಚ್ ಆಗಿರಲಿಲ್ಲ ಎಂದು ಆಸ್ಟ್ರೇಲಿಯಾ ಫಾಕ್ಸ್ ಸ್ಪೋರ್ಟ್ಸ್ ಆರೋಪಿಸಿದೆ. 
ಫಾಕ್ಸ್ ಸ್ಪೋರ್ಟ್ಸ್ ಆರೋಪ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆ ಮಾಧ್ಯಮವನ್ನು ಹಿಗ್ಗಾ ಮುಗ್ಗಾ ಟೀಕಿಸಿದ್ದಾರೆ. ಪಾಕಿಸ್ತಾನ ಮತ್ತು ಬಾಂಗ್ಲಾ ಮಾದರಿಯಲ್ಲಿ ಇದೀಗ ಆಸ್ಟ್ರೇಲಿಯಾ ಸಹ ಸೋಲಿನಲ್ಲಿ ಇಂತಹ ಸಿಲ್ಲಿ ಕಾರಣಗಳನ್ನು ಹುಡುಕುತ್ತಿದೆ ಎಂದು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com