ಕೊಹ್ಲಿ ಹೇಳಿದ ಕ್ರಿಕೆಟ್ ಜಗತ್ತಿನ ಅಪಾಯಕಾರಿ ಬೌಲರ್ ಯಾರು ಗೊತ್ತ?

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ ಅವರಿಗೆ ಬೌಲಿಂಗ್ ಮಾಡಲು ಬೌಲರ್ ಗಳು ಹೆದರುತ್ತಾರೆ. ಅಂತಹದರಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅಪಾಯಕಾರಿ ಬೌಲರ್...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ ಅವರಿಗೆ ಬೌಲಿಂಗ್ ಮಾಡಲು ಬೌಲರ್ ಗಳು ಹೆದರುತ್ತಾರೆ. ಅಂತಹದರಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅಪಾಯಕಾರಿ ಬೌಲರ್ ಯಾರೆಂದು ತಿಳಿಸಿದ್ದಾರೆ. 
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜತೆ ಆಡಿರುವ ವಿರಾಟ್ ಕೊಹ್ಲಿ, ಸಚಿನ್ ಅವರ ಕಾಲದಲ್ಲಿ ಗ್ಲೇನ್ ಮೆಗ್ರಾಥ್, ಬ್ರೆಟ್ ಲೀ, ವಕಾರ್ ಯೂನಿಸ್, ವಾಸಿಂ ಅಕ್ರಂ, ಶೋಯಬ್ ಅಖ್ತರ್ ಉತ್ತುಂಗದಲ್ಲಿದ್ದರು.
ಇವರುಗಳ ಪೈಕಿ ಶೋಯಬ್ ಅಖ್ತರ್ ಅವರ ಮಾರಕ ಬೌಲಿಂಗ್ ದಾಳಿ ಅದ್ಭುತವಾಗಿತ್ತು. ನಾನು ಅಖ್ತರ್ ಅವರ ಬೌಲಿಂಗ್ ನಲ್ಲಿ ಆಡಿಲ್ಲ. ಆದರೆ ಅವರ ಬೌಲಿಂಗ್ ವೇಗವನ್ನು ಕಂಡಿದ್ದೇನೆ. ಅದರಂತೆ ಕ್ರಿಕೆಟ್ ಜಗತ್ತಿನ ಆಕ್ರಮಣಕಾರಿ ಬೌಲರ್ ಎಂದರೆ ಅದು ಅಖ್ತರ್ ಎಂದು ಕೊಹ್ಲಿ ಹೇಳಿದ್ದಾರೆ. 
ನಿಜಕ್ಕೂ ಅಖ್ತರ್ ಅವರು ಗ್ರೇಟ್ ಬೌಲರ್. ಅವರಲ್ಲಿ ಅದ್ಭುತ ಕಲೆ ಇತ್ತು. ಅಖ್ತರ್ ಬೌಲಿಂಗ್ ದಾಳಿಗೆ ಎದುರಾಳಿ ಬ್ಯಾಟ್ಸ್ ಮನ್ ಗಳು ಹೆದರುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com