ಜಗತ್ತನ್ನೇ ಗೆದ್ದ ವೀರನಾದರೂ, ಹೆಂಡತಿಗೆ ಗಂಡನೇ; ಪತ್ನಿ ಸಾಕ್ಷಿಗೆ ಚಪ್ಪಲಿ ತೊಡಿಸಿದ ಧೋನಿ ಫೋಟೋ ವೈರಲ್

ಜಗತ್ತನ್ನೇ ಗೆದ್ದ ವೀರನೇ ಆದರೂ, ಹೆಂಡತಿಗೆ ಮಾತ್ರ ಗಂಡನೇ ಎಂಬ ಗಾದೆಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹೊಸ 'ಸಾಕ್ಷಿ'ಯಾಗಿದ್ದಾರೆ.
ಪತ್ನಿ ಸಾಕ್ಷಿಗೆ ಚಪ್ಪಲಿ ತೊಡಿಸಿದ ಧೋನಿ
ಪತ್ನಿ ಸಾಕ್ಷಿಗೆ ಚಪ್ಪಲಿ ತೊಡಿಸಿದ ಧೋನಿ
Updated on
ಮುಂಬೈ: ಜಗತ್ತನ್ನೇ ಗೆದ್ದ ವೀರನೇ ಆದರೂ, ಹೆಂಡತಿಗೆ ಮಾತ್ರ ಗಂಡನೇ ಎಂಬ ಗಾದೆಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹೊಸ 'ಸಾಕ್ಷಿ'ಯಾಗಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕೂಲ್ ಕ್ಯಾಪ್ಟನ್ ಮಾತ್ರ ಅಲ್ಲ, ಹೆಂಡತಿಗೆ ಒಳ್ಳೆ ಪತಿ ಕೂಡ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕನಾದರೂ ಸಾರ್ವಜನಿಕ ಸ್ಥಳದಲ್ಲಿ ಪತ್ನಿ ಸಾಕ್ಷಿ ಕಾಲಿಗೆ ಚಪ್ಪಲಿ ತೊಡಿಸುವ ಮೂಲಕ ಧೋನಿ ಸರಳತೆ ಮೆರೆದಿದ್ದಾರೆ. ಧೋನಿ ಪತ್ನಿ ಕಾಲಿಗೆ ಚಪ್ಪಲಿ ಹಾಕುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಧೋನಿ ತಮ್ಮ ಕಾಲಿಗೆ ಚಪ್ಪಲಿ ಧರಿಸುತ್ತಿರುವ ಫೋಟೋಗಳನ್ನು ಸ್ನತಃ ಪತ್ನಿ ಸಾಕ್ಷಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, `ನೀವು ಚಪ್ಪಲಿಗಳಿಗೆ ಹಣ ಕೊಟ್ಟಿದ್ದೀರಿ, ಆದ್ದರಿಂದ ನೀವೇ ತೊಡಿಸಿ' ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಮತ್ತೊಂದು ಪೋಸ್ಟ್ ನಲ್ಲಿ ತಮ್ಮ ಮಡದಿಗೆ ಧೋನಿ ಕೊಂಡ ಲೋಹದ ಬ್ಯಾಂಡ್ ಗೂ ಇದೇ ರೀತಿ ಬರೆದಿದ್ದು, ಸಿರೀಸ್ 2 ಎಂದು ಬರೆಯುವ ಮೂಲಕ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
ಸದ್ಯ ಆಸೀಸ್ ವಿರುದ್ಧದ ಟೆಸ್ಟ್ ಟೂರ್ನಿಯಿಂದ ಹೊರಗುಳಿದಿರುವ ಧೋನಿ ಬಿಡುವಿನ ವೇಳೆಯನ್ನು ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಜನವರಿಯಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಏಕದಿನ ಟೂರ್ನಿಯಲ್ಲಿ ಧೋನಿ ಭಾಗವಹಿಸಲಿದ್ದಾರೆ. ಕ್ರಿಕೆಟ್ ಹೊರತಾಗಿಯೂ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಧೋನಿ, ಸಾಮಾಜಿಕ ಜಾಲತಾಣದಲ್ಲಿ ಕುಟುಂಬದೊಂದಿಗಿನ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಕುಟುಂಬ ಸಮೇತ ಮುಖೇಶ್ ಅಂಬಾನಿ ಮಗಳ ಮದುವೆಯಲ್ಲಿ ಧೋನಿ ಭಾಗವಹಿಸಿದ್ದರು. ಈ ವೇಳೆ ಟೀಂ ಇಂಡಿಯಾ ವೇಗಿ ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಕ್ರಿಕೆಟಿಗರು ಭಾಗವಹಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com