ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ಪಂದ್ಯವನ್ನು 'ಬಾಕ್ಸಿಂಗ್ ಡೇ ಟೆಸ್ಟ್' ಅಂತ ಕರೆದಿದ್ದೇಕೆ?

ಆತಿಥೇಯ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ನಾಳೆಯಿಂದ ಆರಂಭವಾಗಲಿದ್ದು ಈ ಪಂದ್ಯವನ್ನು ಬಾಕ್ಸಿಂಗ್ ಡೇ ಅಂತ ಕರೆಯುತ್ತಿದ್ದು ಇದಕ್ಕೆ ರೋಚಕ ಹಿನ್ನಲೆ ಇದೆ...
ಟೀಂ ಇಂಡಿಯಾ
ಟೀಂ ಇಂಡಿಯಾ
ಮೆಲ್ಬರ್ನ್: ಆತಿಥೇಯ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ನಾಳೆಯಿಂದ ಆರಂಭವಾಗಲಿದ್ದು ಈ ಪಂದ್ಯವನ್ನು ಬಾಕ್ಸಿಂಗ್ ಡೇ ಅಂತ ಕರೆಯುತ್ತಿದ್ದು ಇದಕ್ಕೆ ರೋಚಕ ಹಿನ್ನಲೆ ಇದೆ. 
ಕ್ರಿಸ್ಮಸ್ ನಂತರದ ದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಯುರೋಪ್ ರಾಷ್ಟ್ರಗಳ ಚರ್ಚ್ ನಲ್ಲಿ ವರ್ಷಾಂತ್ಯದ ಕೊನೆಯ ವಾರವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ಪರಿಕಲ್ಪನೆ ಇಂಗ್ಲೆಂಡ್ ನಲ್ಲಿ ಮೊದಲಿಗೆ ಆರಂಭಗೊಂಡಿತ್ತು.
ಇನ್ನು ಇದೇ ದಿನವನ್ನು ಐರ್ಲೆಂಡ್ ಮತ್ತು ಸ್ಪೇನ್ ನಲ್ಲಿ ಸೇಂಟ್ ಸ್ಟೀಫನ್ಸ್ ಡೇ ಎಂದು ಕರೆಯಲಾಗುತ್ತದೆ. ರೊಮೇನಿಯಾ, ಹಂಗೇರಿ, ಪೋಲೆಂಡ್, ಜರ್ಮನಿ ಮತ್ತು ನೆದರ್ ಲ್ಯಾಂಡ್ ನಲ್ಲಿ ಬಾಕ್ಸಿಂಗ್ ಡೇ ಬದಲಾಗಿ ಎರಡನೇ ಕ್ರಿಸ್ಮಸ್ ದಿನ ಎಂದು ಸಂಭ್ರಮಿಸಲಾಗುತ್ತದೆ. 
ಈ ದಿನದಂದು ಯುರೋಪ್ ರಾಷ್ಟ್ರಗಳ ಚರ್ಚ್ ಗಳಲ್ಲಿ ಬಾಕ್ಸ್ ಇಟ್ಟು ಹಣ ಮತ್ತು ವಸ್ತುಗಳನ್ನು ಕಾಣಿಕೆ ರೂಪದಲ್ಲಿ ಪಡೆಯಲಾಗುತ್ತದೆ. ಈ ಬಾಕ್ಸ್ ಗಳಿಂದಲೆ ಬಾಕ್ಸಿಂಗ್ ಡೇ ಎಂಬ ಹೆಸರು ಬಂದಿದೆ ಎನ್ನಲಾಗಿದೆ. 
ಆಸ್ಟ್ರೇಲಿಯಾ ಕ್ರಿಕೆಟ್ ಕಬ್ಲ್ ಡಿಸೆಂಬರ್ 26ರಂದು ಟೆಸ್ಟ್ ಪಂದ್ಯವನ್ನು ನಡೆಸುತ್ತಾ ಬಂದಿರುವ ಕಾರಣ ಈ ಮೂರನೇ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಪಂದ್ಯ ಎಂದು ಕರೆಯಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com